ಲೈಂಗಿಕ ಕಿರುಕುಳ: ತಮಿಳಿನ ಸೂಪರ್ ಸ್ಟಾರ್ ಒಬ್ಬರಿಗೆ ಕೆನ್ನೆಗೆ ಬಾರಿಸಿದ್ದ ಖ್ಯಾತ ನಟಿ

First Published 15, Mar 2018, 6:35 PM IST
Radhika Apte Reportedly Slapped A Famous South Actor Once
Highlights

ಇತ್ತೀಚಿಗಷ್ಟೆ ದಕ್ಷಿಣ ಭಾರತದ ನಟಿ ಇಲಿಯಾನ ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿದ್ದರು. ನಿರ್ಮಾಪಕರ ಜೊತೆ ಸಲುಗೆಯಿಂದರೆ ಮಾತ್ರ ಅವಕಾಶ ಹೆಚ್ಚಾಗುತ್ತದೆ' ಎಂದು ತಿಳಿಸಿದ್ದರು.

ಮುಂಬೈ(ಮಾ.15): ಬಾಲಿವುಡ್'ನ ಖ್ಯಾತ ನಟಿ ರಾಧಿಕಾ ಆಪ್ಟೆ ತಮಿಳಿನ ಸೂಪರ್ ಸ್ಟಾರ್ ಒಬ್ಬರಿಗೆ ಕೆನ್ನಗೆ ಬಾರಿಸಿದ್ದ ವಿಷಯವನ್ನು ಸ್ವತಃ ಅವರೆ ಬಹಿರಂಗಪಡಿಸಿದ್ದಾರೆ.

ಬಾಲಿವುಡ್'ನ ಮತ್ತೊಬ್ಬ ನಿರೂಪಿಸಿಕೊಡುವ ಹಿಂದಿಯ ರಿಯಾಲಿಟಿ ಶೋ 'ಬಿಎಫ್'ಎಫ್ ವಿಥ್ ವೋಗ್' ಕಾರ್ಯಕ್ರಮದಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಸುದ್ದಿ ಮಾಧ್ಯಮವೊಂದು ರಾಧಿಕಾ ಅವರು  ಟಾಕ್ ಶೋ'ನಲ್ಲಿ ಮಾತನಾಡಿರುವ ವಿಷಯವನ್ನು ವರದಿ ಮಾಡಿದೆ.

ಬಾಲಿವುಡ್ ನಟ ರಾಜ್'ಕುಮಾರ್ ರಾವ್ ಅವರೊಂದಿಗೆ ಮಾತನಾಡುತ್ತಾ' ಅದು ನನ್ನ ಚಿತ್ರೀಕರಣದ ಮೊದಲ ದಿನವಾಗಿತ್ತು. ಸೆಟ್'ನಲ್ಲಿದ್ದ ತಮಿಳಿನ ಖ್ಯಾತ ನಟ ನನ್ನ ಪಕ್ಕ ಕುಳಿತು ನನ್ನ ತೊಡೆಯನ್ನು ಉಜ್ಜುತ್ತಿದ್ದ. ಕೋಪಗೊಂಡ ನಾನು ತಕ್ಷಣ ಕಪಾಳಕೆ ಬಾರಿಸಿದೆ' ಈ ಮೊದಲು ಆತನನ್ನು ನಾನು ಭೇಟಿಯಾಗಿರಲಿಲ್ಲ' ಎಂದು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ.

ಇತ್ತೀಚಿಗಷ್ಟೆ ದಕ್ಷಿಣ ಭಾರತದ ನಟಿ ಇಲಿಯಾನ ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿದ್ದರು. ನಿರ್ಮಾಪಕರ ಜೊತೆ ಸಲುಗೆಯಿಂದರೆ ಮಾತ್ರ ಅವಕಾಶ ಹೆಚ್ಚಾಗುತ್ತದೆ' ಎಂದು ತಿಳಿಸಿದ್ದರು. ಕನ್ನಡದ ಶೃತಿ ಹರಿಹರನ್ ಕೂಡ ತಮಿಳಿನ ನಿರ್ಮಾಪಕರ ಬಗ್ಗೆ  ತಮ್ಮ ನೋವನ್ನು ತೋಡಿಕೊಂಡಿದ್ದರು.

 

loader