ಈ ಬಾರಿ ಅವರು ನಾಗ​ಶೇ​ಖರ್‌ ನಿರ್ದೇ​ಶ​ನದ ‘ಸಂಜು ಅಲಿ​ಯಾಸ್‌ ಸಂಜು’ ಚಿತ್ರಕ್ಕೆ ನಾಯಕಿ ಆಗಿ​ದ್ದಾ​ರೆ​ನ್ನು​ತ್ತಿವೆ ಮೂಲ​ಗ​ಳು.

ಅಮರ್ ಸಿನಿಮಾದಲ್ಲಿ ದಚ್ಚು, ರಚ್ಚು ಸಖತ್ ಸ್ಟೆಪ್!

‘ಅಮರ್‌’ ಚಿತ್ರದ ನಂತರ ನಿರ್ದೇ​ಶಕ ನಾಗ​ಶೇಖರ್‌ ಅನೌನ್ಸ್‌ ಮಾಡಿದ ಪ್ರಾಜೆಕ್ಟ್ ಇದು. ಅಮರ್‌ ಚಿತ್ರ​ದ ಆವ​ರೇಜ್‌ ಸಕ್ಸಸ್‌ ಬೆನ್ನಲೇ ಸೋಷಲ್‌ ಅವರ ವಿರುದ್ಧ ಕೆಟ್ಟನಿರ್ದೇ​ಶಕ ಎನ್ನುವ ಟೀಕೆ​ಗಳು ಕೇಳಿ ಬಂದಿ​ದ್ದವು. ಆ ನಡು​ವೆಯೇ ನಾಗ​ಶೇ​ಖರ್‌ ತಮ್ಮ ನಿರ್ದೇ​ಶ​ನದ ಹೊಸ ಸಿನಿಮಾ ಸಂಜು ಅಲಿ​ಯಾಸ್‌ ಸಂಜು ಅನೌನ್ಸ್‌ ಮಾಡಿ ಅಚ್ಚರಿ ಗೊಳಿಸಿ​ದ್ದ​ರು. ಈ ಚಿತ್ರ​ಕ್ಕೆ ಇನ್ನು ಹೀರೋ ಫೈನಲ್‌ ಆಗಿಲ್ಲ. ಅದರ ಮಧ್ಯೆಯೇ ನಾಯಕಿ ರಚಿತಾ ರಾಮ್‌ ಎನ್ನುವ ಸುದ್ದಿ ಹೊರ ಬಿದ್ದಿ​ದೆ.‘ ನಿರ್ದೇ​ಶ​ಕ​ ನಾಗ​ಶೇ​ಖರ್‌ ಅವರು ಫೋನ್‌ ಮೂಲಕ ನನ್ನನ್ನು ಸಂಪ​ರ್ಕಿ​ಸಿದ್ದು ನಿಜ, ಆದರೆ ಯಾವುದು ಫೈನಲ್‌ ಆಗಿ​ಲ್ಲ. ಹಾಗಾಗಿ ನಾನು ಅಧಿ​ಕೃತ​ವಾಗಿ ಹೇಳಲು ಆಗು​ವು​ದಿಲ್ಲ. ಯಾವುದೇ ಖಚಿತ ಮಾಹಿತಿ ನೀವು ನಿರ್ದೇ​ಶ​ಕ​ರನ್ನೇ ಸಂಪ​ರ್ಕಿ​ಸಿ​ದರೆ ಒಳ್ಳೆ​ಯ​ದು’ಎನ್ನು​ತ್ತಾರೆ ರಚಿತಾ ರಾಮ್‌.

ಹಾಗಂತ ಈಗಲೇ ಶುರು​ವಾ​ಗುತ್ತಾ ಈ ಸಿನಿಮಾ? ಅದು ಕೂಡ ಖಾತರಿ ಇಲ್ಲ. ನಿರ್ದೇ​ಶಕ ನಾಗ​ಶೇ​ಖರ್‌ ಈಗ ಬಾಲಿ​ವು​ಡ್‌ ಕಡೆ ಮುಖ ಮಾಡಿ​ದ್ದಾ​ರೆ. ಈಗಾಗಲೇ ಬಾಲಿವುಡ್‌ನಲ್ಲೂ ಸಿನಿಮಾ ಅನೌನ್ಸ್‌ ಮಾಡಿ​ದ್ದಾ​ರೆ. ಖ್ಯಾತ ನಿರ್ಮಾಪಕ ಜೋಗಿಂದರ್‌ ಸಿಂಗ್‌ ಪುತ್ರ ಭವೀಶ್‌ಗೆ ಸಿನಿಮಾ ನಿರ್ದೇ​ಶನ ಮಾಡು​ತ್ತಿ​ದ್ದಾರೆ. ಕನ್ನಡದ ‘ಮೈನಾ’ ಹಿಂದಿಗೆ ರಿಮೇಕ್‌ ಆಗು​ತ್ತಿದೆ. ಈ ಸಿನಿಮಾ ಮುಗಿದ ಬಳಿಕವೇ ಬಹು​ತೇಕ ‘ಸಂಜು ಅಲಿ​ಯಾಸ್‌ ಸಂಜು’ ಶುರು​ವಾ​ಗು​ವುದು ಗ್ಯಾರಂಟಿ.

ಹಾಟು-ಗಾಟು-ಬೋಲ್ಡ್ ರಚ್ಚುಗೆ ಸಿಕ್ತು ಇಂಥದ್ದೊಂದು ಕಾಮೆಂಟ್?