ಸ್ಯಾಂಡಲ್‌ವುಡ್ 'ಝಾನ್ಸಿ' ಎಂದೇ ಖ್ಯಾತರಾದ ಈ ನಟಿ ಮನೆಯ ಕರೆಂಟ್ ಬಿಲ್ ರೇಟು ಗಗನ ಮುಟ್ಟಿದ್ದು ವಿದ್ಯುತ್ ಬಿಸಿ ಮುಟ್ಟಿದೆ.

ಬಹುಭಾಷಾ ನಟಿ ಲಕ್ಷ್ಮೀ ರೈ ತಮ್ಮ ನಿವಾಸದ ಕರೆಂಟ್ ಬಿಲ್ ನೋಡಿ ಫುಲ್ ಶಾಕ್ ಆಗಿದ್ದಾರೆ. ಕಳೆದ ಮೂರು ತಿಂಗಳಿಂದ ಎಲೆಕ್ಟ್ರಿಸಿಟಿ ಬಿಲ್ ಮಾಮೂಲಿಗಿಂತ ಹೆಚ್ಚಾಗಿ ಬರುತ್ತಿದ್ದು ಇದಕ್ಕೆ ಕಾರಣ ತಿಳಿಯದೇ ಅದಾನಿ ಎಲೆಕ್ಟ್ರಿಸಿಟಿ (Mumbai) ಅವರನ್ನು ಸಂಪರ್ಕಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ.

ಯಾವುದೇ ರೀತಿಯ ಪ್ರತಿಕ್ರಿಯೆ ಸಿಗದ ಕಾರಣ ಸ್ವತಃ ಲಕ್ಷ್ಮಿ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಕರೆಂಟ್ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. 'ನನ್ನ ಗಮನದ ಪ್ರಕಾರ ಎಲೆಕ್ಟ್ರಿಸಿಟಿ ಬಿಲ್ ಮಾಮೂಲಿಗಿಂತ ಹೆಚ್ಚಾಗಿ ಬರುತ್ತಿದೆ. ತುಂಬಾ ದಿನಗಳಿಂದ Adani Electricity ಸಂಪರ್ಕಿಸಲು ಪ್ರಯತ್ನಪಡುತ್ತಿದೇನೆ. ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ'. ಎಂದು ಬರೆದುಕೊಂಡಿದ್ದಾರೆ.

Scroll to load tweet…

ಇದಾದ ಕೆಲವೇ ದಿನಗಳಲ್ಲಿ ಅದಾನಿ ಎಲೆಕ್ಟ್ರಿಸಿಟಿ ಸಂಸ್ಥೆ ಲಕ್ಷ್ಮಿಯವರನ್ನು ಸಂಪರ್ಕಿಸಿ ಅವರ ನಿವಾಸಕ್ಕೆ ಭೇಟಿ ನೀಡಿ ಕರೆಂಟ್ ಬಳಕೆ ಬಗ್ಗೆ ಪರಿಶೀಲನೆ ನಡೆಸಿ ಅತಿಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

Scroll to load tweet…