6 ವರ್ಷಗಳ ಕಾಲ ಪುಟ್ಟಗೌರಿ ಧಾರವಾಹಿ ಮೂಲಕ ಜನರ ಮನಸ್ಸಿಗೆ ಹತ್ತಿರವಾದ ರಂಜಿನಿ ರಾಘವನ್ ಇನ್ನಷ್ಟು ಹತ್ತಿರವಾಗಲು ಹೊಸ ಪ್ರಯೋಗದೊಂದಿಗೆ ಜನರ ಮುಂದೆ ಬರುತ್ತಿದ್ದಾರೆ.

ನಿರ್ದೇಶಕಿ ಆಗಿ ಗುರುತಿಸಿಕೊಳ್ಳುವ ಆಸೆ ಇರುವ ರಂಜಿನಿ ತನ್ನ ಇಷ್ಟು ವರ್ಷದ ನಟನೆಯ ಅನುಭವದಿಂದ ಹೊಸ ಧಾರಾವಾಹಿ ನಿರ್ದೇಶನ ಮಾಡುವುದಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಕಲರ್ಸ್ ವಾಹಿನಿಯಲ್ಲೇ ಮಾಡುವುದು ಖಚಿತವಾಗಿದ್ದು ಧಾರಾವಾಹಿಯ ಹೆಸರು ಇನ್ನು ಬಹಿರಂಗ ಮಾಡಿಲ್ಲ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಸಲುವಾಗಿ ಸದ್ಯಕ್ಕೆ ರಂಜಿನಿ ಪಾತ್ರಧಾರಿಗಳಿಗೆ ಆಡಿಷನ್ ಮಾಡುತ್ತಿದ್ದಾರೆ.