ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗಟ್ಟಿಮೇಳ’ ಧಾರಾವಾಹಿಯ ನಟನಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

ಮೇ 26ರಂದು ಭಾನುವಾರ ಅನುಷಾಳೊಂದಿಗೆ ಬೆಂಗಳೂರು ಅರಮನೆ ಮೈದಾನದ ಶೀಶ್ ಮಹಲ್ ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ.

ಈ ವಿಚಾರವನ್ನು ಕುದ್ದು ರಕ್ಷ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮದುವೆ ಅಮಂತ್ರಣದೊಂದಿಗೆ ಪೋಸ್ಟ್ ಮಾಡಿದ್ದು ‘ ಹೌದು, I am getting Hitched! ಇದು ನಿಮಗೆಲ್ಲಾ ನನ್ನಿಂದ ಅಧಿಕೃತ ಆಮಂತ್ರಣ. ಎಲ್ಲರೂ 26ರಂದು ಬಂದು ನನಗೆ ಆಶೀರ್ವದಿಸಬೇಕು ಎಂದು ಕೇಳಿಕೊಳ್ಳುವೆ. ಸ್ಥಳ: ಅರಮನೆ ಮೈದಾನ ಶೀಶ್ ಮಹಾಲ್’ ಎಂದು ಬರೆದುಕೊಂಡಿದ್ದಾರೆ.

 

ಇನ್ನು ರಕ್ಷ್ ಈ ಹಿಂದೆ ‘ಪುಟ್ಟಗೌರಿ’ ಮದುವೆ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು ಮಹೇಶ ಎಂದೇ ಫೇಮಸ್ ಆಗಿದ್ದರು.