ಪುನೀತ್ ಹೊಸ ಸಾಹಸ

ಪಿಆರ್‌ಕೆ ಬ್ಯಾನರ್ ಮೂಲಕ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವ ಪುನೀತ್, ಇದೀಗ ಆಡಿಯೋ ಕಂಪನಿಯನ್ನೂ ಹುಟ್ಟುಹಾಕಲು ನಿರ್ಧರಿಸಿದ್ದಾರೆ. ಅವರು ಈಗ ನಟಿಸುತ್ತಿರುವ ಅಂಜನಿಪುತ್ರ ಚಿತ್ರದ ಆಡಿಯೋವನ್ನು ಪುನೀತ್‌ರಾಜ್‌ಕುಮಾರ್ ಆಡಿಯೋ ಸಂಸ್ಥೆಯ ಮೂಲಕವೇ ಬಿಡುಗಡೆ ಮಾಡಲು ಪುನೀತ್ ನಿರ್ಧರಿಸಿದ್ದಾರೆ. ಹರ್ಷ ನಿರ್ದೇಶನದ ‘ಅಂಜನಿಪುತ್ರ’ ಚಿತ್ರದಲ್ಲಿ ಆರು ಹಾಡುಗಳಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ.

ಪುನೀತ್ ಚಿತ್ರಗಳ ಹಾಡುಗಳಿಗೆ ಅಪಾರ ಬೇಡಿಕೆ ಇದ್ದು, ಆಡಿಯೋ ಹಕ್ಕು ದೊಡ್ಡ ಬೆಲೆಗೆ ಮಾರಾಟ ಆಗುತ್ತಿತ್ತು. ಇದೀಗ ಪುನೀತ್ ತಮ್ಮದೇ ಆಡಿಯೋ ಸಂಸ್ಥೆ ಆರಂಭಿಸುವ ಮೂಲಕ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ