ಪವನ್ ಒಡೆಯರ್ ನಿರ್ದೇಶನದ ‘ನಟ ಸಾರ್ವಭೌಮ’ ಚಿತ್ರದ ಚಿತ್ರೀಕರಣದ ನಡುವೆಯೇ ಪುನೀತ್ ರಾಜ್ ಕುಮಾರ್ ವಿದೇಶಕ್ಕೆ ಹಾರಿದ್ದಾರೆ. 

ಅವರೀಗ ನೆದರ್‌ಲ್ಯಾಂಡ್ ರಾಜಧಾನಿ ಆ್ಯಮ್‌ಸ್ಟರ್ ಡ್ಯಾಮ್‌ನಲ್ಲಿದ್ದಾರೆ. ಹಾಗಂತ ಅವರು ಅಲ್ಲಿಗೆ ಹೋಗಿದ್ದು ಮತ್ಯಾವುದೋ ಚಿತ್ರದ ಚಿತ್ರೀಕರಣದ ಉದ್ದೇಶಕ್ಕಲ್ಲ. ಬದಲಿಗೆ ಆ್ಯಮ್‌ಸ್ಟರ್‌ಡ್ಯಾಮ್‌ನಲ್ಲಿ ಆಯೋಜನೆಗೊಂಡಿದ್ದ ಟಿಸಿಎಸ್ 2018 ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡು ಹರ್ಷ ವ್ಯಕ್ತಪಡಿಸಿದ್ದಾರೆ ಪುನೀತ್. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾವಿರಾರು ಜನರು ಪಾಲ್ಗೊಂಡಿದ್ದ ಆ ಮ್ಯಾರಾಥಾನ್‌ನಲ್ಲಿ ಅಧಿಕ ಸಂಖ್ಯೆಯಲ್ಲಿ ಅಲ್ಲಿನ ಕನ್ನಡಿಗರು ಭಾಗವಹಿಸಿದ್ದರು. ಸಾಮಾಜಿಕ ಕಾಳಜಿಗಾಗಿ ನಡೆದ ಮ್ಯಾರಾಥಾನ್ ಅದು. ಅಲ್ಲಿಗೆವಿಶೇಷ ಅತಿಥಿ ಆಗಿ ಹೋಗಿದ್ದರು ಪುನೀತ್. ಅಲ್ಲಿನ ಕನ್ನಡಿಗರಿಂದಲೇ ಅವರಿಗೆ ಆಹ್ವಾನ ಬಂದಿತ್ತು. ಆ ಕಾರಣಕ್ಕಾಗಿಯೇ ಅವರು ಅಲ್ಲಿಗೆ ತೆರೆಳಿ, ಸಾಮಾಜಿಕ ಕಾಳಜಿಗೆ ಪುನೀತ್ ಆ್ಯಮ್‌ಸ್ಟರ್‌ಡ್ಯಾಮ್ ರಸ್ತೆಗಳಲ್ಲಿ ರನ್ ಮಾಡಿದ್ದು ವಿಶೇಷ.

‘ಮ್ಯಾರಾಥಾನ್‌ನಲ್ಲಿ ಓಡಿದ್ದು ಅದ್ಬುತ ಅನುಭವ. ಹಾಗೆಯೇ ಇಲ್ಲಿ ಸಾಕಷ್ಟು ಮಂದಿ ಕನ್ನಡಿಗರನ್ನು ಭೇಟಿ ಮಾಡಿದ್ದು ಖುಷಿ ಕೊಟ್ಟಿದೆ’ ಎಂದು ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ. ಸಂತೋಷ್ ಆನಂದ್‌ರಾಮ್ ಜತೆಗಿನ ಅವರ ಹೊಸ ಸಿನಿಮಾದ ಟೈಟಲ್ ನವೆಂಬರ್ 1ಕ್ಕೆ ಅನೌನ್ಸ್ ಆಗಲಿದೆ. ಬಹುತೇಕ ಅದು ನವೆಂಬರ್ ಮೊದಲ ವಾರದಿಂದಲೇ ಚಿತ್ರೀಕರಣ ಶುರುವಾಗುತ್ತಿದೆ.