‘ಕನ್ನಡದಲ್ಲೂ ಡಬ್ಬಿಂಗ್‌ ಸಿನಿಮಾ ಬರಬೇಕು' ಎಂಬ ತೆಲುಗು ಚಿತ್ರ ನಿರ್ದೇಶಕ ರಾಜಮೌಳಿ ಅವರ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು

ಮಂಡ್ಯ(ಮೇ.15): ‘ರಾಜಮೌಳಿ ಅವರಿಗೆ ಡಬ್ಬಿಂಗ್‌ ಬೇಕು. ಆದರೆ, ನಮಗೆ ಬೇಡ' ಎಂದು ಕನ್ನಡ ಚಿತ್ರ ನಟ ಪುನೀತ್‌ ರಾಜ್‌ಕುಮಾರ್‌ ಹೇಳಿದ್ದಾರೆ. ನಗರದ ಗುರುಶ್ರೀ ಚಿತ್ರಮಂದಿರದಲ್ಲಿ ಭಾನುವಾರ ಅಭಿಮಾನಿಗಳೊಂದಿಗೆ ‘ರಾಜಕುಮಾರ' ಚಿತ್ರ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಕನ್ನಡದಲ್ಲೂ ಡಬ್ಬಿಂಗ್‌ ಸಿನಿಮಾ ಬರಬೇಕು' ಎಂಬ ತೆಲುಗು ಚಿತ್ರ ನಿರ್ದೇಶಕ ರಾಜಮೌಳಿ ಅವರ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು. ಡಬ್ಬಿಂಗ್‌ ಚಿತ್ರಗಳನ್ನು ಕನ್ನಡಿಗರು ವಿರೋಧಿಸಬಾರದು ಎಂದು ರಾಜಮೌಳಿ ಹೇಳಿದ್ದಾರೆ. ಇದು ರಾಜಮೌಳಿ ಅವರ ಅಭಿಪ್ರಾಯವೇ ಹೊರತು ಕನ್ನಡಿಗರದ್ದಲ್ಲ. ಡಬ್ಬಿಂಗ್‌ ಬೇಡ ಎನ್ನುವುದು ನನ್ನ ಅಭಿಪ್ರಾಯ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred