ಪುನೀತ್ ಮನೆ ಮೇಲೆ ಐಟಿ ದಾಳಿ | ಇಂದು ನಟ ಸಾರ್ವಭೌಮ ಆಡಿಯೋ ರಿಲೀಸ್‌ನಲ್ಲಿ ಪುನೀತ್ ಭಾಗಿ | ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪುನೀತ್, ರಾಘವೇಂದ್ರ ರಾಜ್‌ಕುಮಾರ್ ಭಾಗಿ 

ಹುಬ್ಬಳ್ಳಿ (ಜ.05): ಪುನೀತ್ ರಾಜ್ ಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದು ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ನಟ ಸಾರ್ವಭೌಮ ಆಡಿಯೋ ರಿಲೀಸ್ ಫಂಕ್ಷನ್ ನಲ್ಲಿ ಪುನೀತ್ ಭಾಗಿಯಾಗಲಿದ್ದಾರೆ. 

ನಟಸಾರ್ವಭೌಮ ಕಾರ್ಯಕ್ರಮಕ್ಕೆ ನಾನು ಬರ್ತಿದ್ದೇನೆ. ನೀವು ಬನ್ನಿ ಎಂದು ಪುನೀತ್ ಟ್ವೀಟ್ ಮಾಡಿದ್ದಾರೆ.

Scroll to load tweet…

ಇನ್ನು ನಟ ಸಾರ್ವಭೌಮ ಆಡಿಯೋ ಸಮಾರಂಭಕ್ಕೆ ರಾಘವೇಂದ್ರ ‌ರಾಜ್‌ಕುಮಾರ್ ಕುಟುಂಬ ಕೂಡಾ ತೆರಳಿದೆ. ರಾಘವೇಂದ್ರ ರಾಜ್ ಕುಮಾರ್ ಹಾಗೂ ಪತ್ನಿ ಮಂಗಳ‌ ರಾಘವೇಂದ್ರ ‌ಜೊತೆ ವಿನಯ್ ರಾಜ್ ಕುಮಾರ್ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ್ದಾರೆ. ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ನಿಂದ ಹಲ್ಲೆಗೆ ಒಳಗಾಗಿದ್ದ ವಿದ್ವತ್ ಕೂಡ ವಿನಯ್ ರಾಜ್‌ಕುಮಾರ್ ಜೊತೆ‌ ಪ್ರಯಾಣ ಬೆಳೆಸಿದ್ದಾರೆ.