ಪುನೀತ್ ರಾಜ್‌ಕುಮಾರ್ ಅಧಿಕೃತವಾಗಿ ಟ್ವಿಟರ್‌ಗೆ | ಅಕೌಂಟ್ ಕ್ರಿಯೇಟ್ ಆಗಿದ್ದೇ ತಡ ಹೆಚ್ಚಾದ ಫಾಲೋವರ್ಸ್ | ಪುನೀತ್‌ಗೆ ಸ್ವಾಗತ ಕೋರಿದ ಸೆಲಬ್ರಿಟಿಗಳು 

ಬೆಂಗಳೂರು (ಸೆ. 01): ಪುನೀತ್ ರಾಜ್‌ಕುಮಾರ್ ಕೊನೆಗೂ ಅಧಿಕೃತವಾಗಿ ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟಿದ್ದಾರೆ.

ಇತ್ತೀಚೆಗೆ ಅವರ ಹೆಸರಿನಲ್ಲಿ ಬೇರೆ ಯಾರೋ ಫೇಕ್ ಟ್ವೀಟರ್ ಅಕೌಂಟ್ ಕ್ರಿಯೇಟ್ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಅದು ತನ್ನದಲ್ಲ ಎನ್ನುವ ಸ್ಪಷ್ಟನೆಯನ್ನೂ ಪುನೀತ್ ರಾಜ್‌ಕುಮಾರ್ ನೀಡಿದ್ದರು. ಇದೀಗ ಅವರ ಹೆಸರಲ್ಲಿ ಅಧಿಕೃತವಾದ ಟ್ವಿಟ್ಟರ್ ಅಕೌಂಟ್ ಚಾಲ್ತಿಗೆ ಬಂದಿದೆ.

ಅದು ಕ್ರಿಯೇಟ್ ಆಗಿದ್ದೇ ತಡ, ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ. ಚಿತ್ರರಂಗದ ಬಹುತೇಕ ಸೆಲೆಬ್ರಿಟಿಗಳು ಪುನೀತ್‌ಗೆ ಸ್ವಾಗತ ಕೋರಿದ್ದಾರೆ. ಅವರನ್ನು ಫಾಲೋ ಮಾಡಲು ತನ್ನ ಫಾಲೋವರ್ಸ್‌ಗಳನ್ನು ಕೇಳಿಕೊಂಡಿದ್ದಾರೆ. ಆದರು ಪವರ್ ಸ್ಟಾರ್ ಮಾತ್ರ ಇನ್ನು ಯಾರನ್ನು ಫಾಲೋ ಮಾಡಿಲ್ಲ. 

ಪುನೀತ್ ಅಕೌಂಟ್‌ಗೆ ಹೋಗಲು ಈ ಲಿಂಕ್ ಕ್ಲಿಕ್ ಮಾಡಿ