ಹುಟ್ಟುಹಬ್ಬದ ದಿನ ಅಮ್ಮನನ್ನು ನೆನೆದು ಭಾವುಕರಾದ ಅಪ್ಪು

First Published 17, Mar 2018, 12:04 PM IST
Puneeth Rajkumar Birthday
Highlights

ಅಭಿಮಾನಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದಕ್ಕೆ  ಖುಷಿಯಾಗುತ್ತಿದೆ.  ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆಯಲ್ಲಿ ಅಮ್ಮ ಇಲ್ಲ ಅನ್ನೋದೇ ಬೇಜಾರಿನ ಸಂಗತಿ ಎಂದು ಪುನೀತ್ ಅಮ್ಮನನ್ನು ನೆನೆದು ಭಾವುಕರಾದರು. 

ಬೆಂಗಳೂರು (ಮಾ. 17): ಅಭಿಮಾನಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದಕ್ಕೆ  ಖುಷಿಯಾಗುತ್ತಿದೆ.  ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆಯಲ್ಲಿ ಅಮ್ಮ ಇಲ್ಲ ಅನ್ನೋದೇ ಬೇಜಾರಿನ ಸಂಗತಿ ಎಂದು ಪುನೀತ್ ಅಮ್ಮನನ್ನು ನೆನೆದು ಭಾವುಕರಾದರು. 

ಅಭಿಮಾನಿಗಳೇ  ರಾಜರತೋತ್ಸವ  ಹೆಸರಲ್ಲಿ ಸೆಲಬ್ರೇಟ್ ಮಾಡುತ್ತಿದ್ದಾರೆ.  ನಟಸಾರ್ವಭೌಮ ಅಂತ ಸಿನಿಮಾಗೆ ಹೆಸರಿಟ್ಟಿರೋದಕ್ಕೆ ಭಯ ಆಗ್ತಿದೆ. ಈ ಹಿಂದೆ ರಾಜಕುಮಾರ ಅಂತ ಸಿನಿಮಾಗೆ ಹೆಸರಿಟ್ಟಾಗಲೂ ಭಯವಾಗಿತ್ತು.  ಹೇರ್ ಸ್ಟೈಲ್ ಸಿಕ್ಕಾಪಟ್ಟೆ  ಟ್ರೆಂಡ್ ಆಗುತ್ತಿರುವುದಕ್ಕೆ  ಖುಷಿಯಿದೆ.  ಜುಲೈಗೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಲಿದೆ ಎಂದಿದ್ದಾರೆ. 

 

loader