ಸ್ಯಾಂಡಲ್ ವುಡ್ ಪವರ್ ಸ್ಟಾರ್ ಕೆಲ ದಿನಗಳ ಹಿಂದೆ ಅಭಿಮಾನಿಗಳಿಗೊಂದು ಕೇಕ್, ಹೂವು ಅಥವ ತುಂಬಾ ಬೆಲೆ ಬಾಳುವಂತಹ ವಸ್ತು ತರದಂತೆ ಮನವಿ ಮಾಡಿಕೊಂಡಿದ್ದರು. ಅಭಿಮಾನಿಗಳು ಅದರಂತೆ ನಡೆದುಕೊಂಡದ್ದಕ್ಕೆ  ಅಪ್ಪು ಫುಲ್ ಖುಷ್ ಆಗಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಪುನೀತ್ ತಮ್ಮ ಮನೆಗೆ ಆಗಮಿಸಿದ ಎಲ್ಲಾ ಅಭಿಮಾನಿಗಳನ್ನು ಭೇಟಿ ಮಾಡಿ ಕೆಲಕಾಲ ಸಮಯ ಕಳೆದಿದ್ದಾರೆ.  ಹಾಗೂ ತಾವು ಮಾಡಿದ ಮನವಿಯನ್ನು ಪಾಲಿಸಿದ್ದಕ್ಕೆ ಅಭಿಮಾನಿಗಳೇ ದೇವರೆಂದಿದ್ದಾರೆ ಪುನೀತ್ ರಾಜ್ ಕುಮಾರ್. 

ಇನ್ನು ಹುಟ್ಟು ಹಬ್ಬದ ಹಿನ್ನೆಲೆ ತಮ್ಮ ಜೀವನದ ದಿ ಮೋಸ್ಟ್ ಇಂಪಾರ್ಟೆಂಟ್  ಗಿಫ್ಟ್ ಏನೆಂದು ಹಂಚಿಕೊಂಡಿದ್ದಾರೆ. ಪುನೀತ್ ತಮ್ಮ18 ನೇ ವರ್ಷದ ಹುಟ್ಟುಹಬ್ಬದಂದು ತಂದೆ-ತಾಯಿಯಿಂದ ತಮ್ಮ ನೆಚ್ಚಿನ ಕಾರ್ ನ್ನು  ಗಿಫ್ಟ್ ಆಗಿ ಪಡೆದಿಕೊಂಡಿದ್ದುರು. ಇದಲ್ಲದೇ ತಮ್ಮ ಕುಟುಂಬವೇ ತಮ್ಮ ಜೀವನದ ಅಮೂಲ್ಯ ಗಿಫ್ಟ್ ಎಂದು ಹೇಳಿಕೊಂಡಿದ್ದಾರೆ. 

ಇನ್ನು ಮನೆಗೆ ಆಗಮಿಸಿದ ಅತಿಥಿಗಳಿಗೆ ಪುನೀತ್ ಮತ್ತೊಂದು ಮನವಿ ಮಾಡಿಕೊಂದ್ದಾರೆ ಅದುವೇ ಬೇಸಿಗೆ ಹೆಚ್ಚಿರುವ ಕಾರಣದಿಂದ ಮನೆಯ ಸುತ್ತ ಪ್ರಾಣಿ ಪಕ್ಷಿಗಳಿಗೆ ನೀರಿಟ್ಟು ಸಹಾಯ ಮಾಡಬೇಕೆಂದು ಕೇಳಿಕೊಂಡಿದ್ದಾರೆ.

ಸದ್ಯ ಯುವರತ್ನ ಚಿತ್ರದಲ್ಲಿ ಬ್ಯುಸಿ ಆಗಿದ್ದು, ಚಿತ್ರದಲ್ಲಿ ಕಾಲೇಜ್ ಹುಡುಗನ ಪಾತ್ರ ಮಾಡುತ್ತಿದ್ದು, ಬಹುತೇಕ ಶೂಟಿಂಗ್ ಧಾರವಾಡದಲ್ಲಿ ನಡೆದಿದೆ.