ಬೆಂಗಳೂರು[ಜ.10]: ಸಿನಿಮಾ ನಿರ್ಮಾಪಕ ಕೆ ಮಂಜು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಬುಧವಾರ ರಾತ್ರಿ ಚಿಕಿತ್ಸೆಗಾಗಿ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಹೃದಯದಲ್ಲಿ ಬ್ಲಾಕೇಜ್ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬುಧವಾರ ರಾತ್ರಿಯೇ ಶಸ್ತ್ರಚಿಕಿತ್ಸೆ ಮೂಲಕ ಕ್ಲಿಯರ್ ಮಾಡಲಾಗಿದೆ. ಸದ್ಯ ಮಂಜುರವರ ಪುತ್ರ ಶ್ರೇಯಸ್ ತಂದೆಯ ಕುರಿತಾಗಿ ಮಾಹಿತಿ ನೀಡಿ ರಕ್ತನಾಳದಲ್ಲಿ ನಾಲ್ಕು ಬ್ಲಾಕ್ ಇತ್ತು. ಶಸ್ತ್ರ ಚಿಕಿತ್ಸೆ ನಡೆಸಿದ್ದೇವೆ. ಈಗ ಅಪ್ಪ ಆರೋಗ್ಯವಾಗಿದ್ದಾರೆ, ಆತಂಕಪಡುವಂತದ್ದೇನಿಲ್ಲ. ವೈದ್ಯರು ಮೂರು‌ ದಿನ ರೆಸ್ಟ್  ಹೇಳಿದ್ದಾರೆ. ಭಾನುವಾರ ಡಿಸ್ಚಾರ್ಜ್ ಮಾಡುತ್ತೇವೆ ಎಂದಿದ್ದಾರೆ.

ನಟ ಯಶ್, ಸುದೀಪ್ ಸೇರಿದಂತೆ ಎಲ್ಲರು ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ರವಿಚಂದ್ರನ್ ಆಸ್ಪತ್ರೆಗೆ ತೆರಳಿ ಮಂಜುರವರನ್ನು ಭೇಟಿಯಾಗಿದ್ದಾರೆ.