ನಟಿ ರಶ್ಮಿಕಾ ಮೇಲೆ ಕೋಪ ಮಾತ್ರ ಅದ್ಯಾಕೋ ಕಡಿಮೆನೇ ಆಗ್ತಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ರಶ್ಮಿಕಾ ವಿವಾದದಲ್ಲಿ ಸಿಕ್ಕಿ ಹಾಕಿಕೊಳ್ತಾನೆ ಇದ್ದಾರೆ. ಇತ್ತೀಚಿಗಷ್ಟೇ ‘ಕನ್ನಡ ನನಗೆ ಕಷ್ಟ’ ಎಂದಿರುವ ವಿಚಾರ ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ರಾಜ್ಯದಲ್ಲಿನ ಜನರು ರಶ್ಮಿಕಾ ಮೇಲೆ ಕೋಪ ಮಾಡಿಕೊಳ್ಳಲು ಕಾರಣವಾಗಿದೆ. 

ಈ ವಿಚಾರವಾಗಿ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದ ಕನ್ನಡ ಪರ ಸಂಘಟನೆ ಹೋರಾಟಗಾರರು ಇಂದು ರಶ್ಮಿಕಾ ಅಭಿನಯದ ಸಿನಿಮಾ ‘ಡಿಯರ್ ಕಾಮ್ರೆಡ್’ ಬಿಡುಗಡೆ ಆಗಿದ್ದ ಥಿಯೇಟರ್ ಗೆ ಮುತ್ತಿಗೆ ಹಾಕಿದ್ರು. ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದರು. 

ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ರಶ್ಮಿಕಾಳನ್ನ ಬ್ಯಾನ್ ಮಾಡುವಂತೆ ವಾಣಿಜ್ಯ ಮಂಡಳಿಗೆ ಪತ್ರ ನೀಡಿದ್ದರು. ವಾಣಿಜ್ಯ ಮಂಡಳಿ ಕ್ರಮ ಜರುಗಿಸದ ಹಿನ್ನಲೆಯಲ್ಲಿ ಇಂದು ಕೆಜಿ ರಸ್ತೆಯಲ್ಲಿರೋ ಮೇನಕಾ ಥಿಯೇಟರ್ ಗೆ ಮುತ್ತಿಗೆ ಹಾಕಿ ರಶ್ಮಿಕಾರನ್ನ ಕನ್ನಡ ಚಿತ್ರತಂಗದಿಂದ ಬ್ಯಾನ್ ಮಾಡುವಂತೆ ಒತ್ತಾಯ ಮಾಡಿದರು. 

ಕನ್ನಡಕ್ಕೆ ರಶ್ಮಿಕಾ ಯಾಕಣ್ಣ ..ಬೇರೆ ನಾಯಕಿಯರು ಇದ್ದಾರಣ್ಣ...

ಇನ್ನು ರಶ್ಮಿಕಾ ವಿರುದ್ಧ ಮಾತನಾಡಿದ ಹೋರಾಟಗಾರರು ರಶ್ಮಿಕಾ ನಮ್ಮ ಹುಡುಗಿ ಎಂದು ನಾವೆಲ್ಲ ಹೆಮ್ಮೆಪಡ್ತಿದ್ವಿ.  ಆದ್ರೆ ಕನ್ನಡ ಕಷ್ಟ ಎಂದು ಹೇಳಿಕೆ ಕೊಟ್ಟು ನಾಡದ್ರೋಹ ಕೆಲಸ ಮಾಡಿದ್ದಾರೆ. ಹಾಗಾಗಿ ರಶ್ಮಿಕಾರನ್ನ ಬ್ಯಾನ್ ಮಾಡಬೇಕು. ಮುಂದಿನ ದಿನಗಳಲ್ಲಿ ತಾಕತ್ತು ಇದ್ದರೆ ಕನ್ನಡ ಸಿನಿಮಾ ಮಾಡಲಿ ಎಂದು ಸವಾಲು ಹಾಕಿದ್ದಾರೆ.