ಮುಂಬೈ(ಅ.30): ಸದ್ಯ ಹಾಲಿವುಡ್ ನಲ್ಲಿ ಸಖತ್ ಸದ್ದು ಮಾಡುತ್ತಿರುವ ಹಾಟ್ ಪ್ರಿಯಾಂಕ ಚೋಪ್ರಾ ಮುಂಬೈನಲ್ಲಿ ಹೊಸ ಮನೆಯೊಂದನ್ನು ಕಟ್ಟಲು ಶುರು ಮಾಡಲಿದ್ದು, ಸುಮಾರು 100 ಕೋಟಿ ವೆಚ್ಚದಲ್ಲಿ ಈ ಮನೆಯನ್ನು ನಿರ್ಮಿಸಲಿದ್ದಾರೆ ಎನ್ನಲಾಗಿದೆ. 

ಹಾಟ್ ಬೆಡಗಿ ಪ್ರಿಯಾಂಕ ಚೋಪ್ರಾ ಸದ್ಯ ಅಮೇರಿಕಾದಲ್ಲಿದ್ದು  ಅಲ್ಲೇ ಸೆಟ್ಲ್  ಆಗೋದಕ್ಕೆ ಹೊರಟಿದ್ದರು. ಆದರೆ ಮನಸ್ಸು ಬದಲಿಸಿ ಭಾರತದಲ್ಲೇ ಮನೆ ಮಾಡಲು ನಿರ್ಧರಿಸಿದ್ದಾರೆ. 

ಪಿಗ್ಗಿ  ಮುಂಬೈನಲ್ಲಿ ಐಶಾರಾಮಿ ಮನೆ ಕಟ್ಟೋಕೆ 100 ಕೋಟಿ ಖರ್ಚು ಮಾಡಲು ಮುಂದಾಗಿದ್ದಾರಂತೆ. ಇಂಟಿರಿಯರ್ ಗಾಗಿಯೇ ಸಖತ್ ಖರ್ಚು ಮಾಡಲಿದ್ದು, ಅರಮನೆ ಮಾದರಿಯಲ್ಲಿ ಮನೆ ಕಟ್ಟಲು ಪ್ಲಾನ್ ರೆಡಿಯಾಗಿದೆ.