ಬೆಂಗಾಲ್ ಬೆಡಗಿ ಪ್ರಿಯಾಂಕ ಉಪೇಂದ್ರ ಹಾಗೂ ಐಶ್ವರ್ಯ ಉಪೇಂದ್ರ ಅಭಿನಯದ ದೇವಕಿ ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಚಿತ್ರರಂಗದಲ್ಲಿ ಹೊಸ ಕಲರವ ಮೂಡಿಸುವುದು ಗ್ಯಾರಂಟಿ.

ಉಪೇಂದ್ರ ಪುತ್ರಿಯ ಮೊದಲ ಸಿನಿಮಾ ಇದಾಗಿದ್ದು ಇದರ ಫಸ್ಟ್ ಲುಕ್ ನಟಿ ಪಾರೂಲ್ ಯಾದವ್ ಬಿಡುಗಡೆ ಮಾಡಿದ್ದಾರೆ. Child Trapping ಮಾಫಿಯಾ ಕುರಿತಾಗಿ ಮಾಡಿರುವ ದೇವಕಿ ಸಿನಿಮಾ ಟೀಸರ್‌ನಲ್ಲಿ ನೈಜ ದೃಶ್ಯದ ರೀತಿಯಲ್ಲೇ ತೊರಿಸಿದ್ದಾರೆ ಚಿತ್ರ ನಿರ್ದೇಶಕ ಲೋಹಿತ್. ಈ ಹಿಂದೆ ಮಮ್ಮಿ ಸಿನಿಮಾ ನಿರ್ದೇಶನ ಮಾಡಿದ್ದು ಅದರಲ್ಲೂ ಪ್ರಿಯಾಂಕ ನಾಯಕಿ ಆಗಿ ಅಭಿನಯಿಸಿದ್ದಾರೆ.