ತಮ್ಮ ಹಾಗೆಯೇ ಮಗಳು ಬಣ್ಣ ಹಚ್ಚಿ ಸಿನಿ ದುನಿಯಾಕ್ಕೆ ಕಾಲಿಟ್ಟಸಂದರ್ಭ, ಆಕೆಯ ಪಾತ್ರದ ಫಸ್ಟ್‌ ಲುಕ್‌ ಅನ್ನು ಕಣ್ತುಂಬಿಕೊಳ್ಳುವ ಕ್ಷಣಕ್ಕಾಗಿ ಉಪೇಂದ್ರ ಕೂಡ ಹಾಜರಿದ್ದರು. ಹಾಗೆಯೇ ಪ್ರಿಯಾಂಕಾ ಕೂಡ ಇದ್ದರು. ದೇವಕಿಯ ಕಥಾನಾಯಕಿಯೇ ಅವರು.

ಐಶ್ವರ್ಯ ಸಿಕ್ಕಾಪಟ್ಟೆಟ್ಯಾಲೆಂಟೆಡ್‌ ಇದ್ದಾಳೆ. ಒಮ್ಮೆ ಹೇಳಿದ್ದನ್ನು ಬಹುಬೇಗ ಗ್ರಹಿಸುತ್ತಾಳೆ. ಹಾಗಲ್ಲ, ಹೀಗೆ ಅಂತ ನಾನು ಹೇಳಿದ್ರೆ, ಪುನಃ ನನ್ನನ್ನೇ ಅದ್ಯಾಕೆ ಅಂತ ಪ್ರಶ್ನಿಸಿ, ಅತ್ಯುತ್ತಮವಾಗಿ ನಟಿಸಿ ತೋರಿಸುತ್ತಿದ್ದಳು. ಎಲ್ಲೂ ನನಗೆ ಕಷ್ಟಅಂತ ಎನಿಸಲಿಲ್ಲ, ರಾತ್ರಿ ನಾಲ್ಕು ಗಂಟೆಗೂ ಎಚ್ಚರವಿದ್ದು ನಟಿಸಿದ್ದಾಳೆ. ಆಕೆಗೆ ಸಿನಿಮಾ ಮೇಲೆ ಎಷ್ಟುಇಷ್ಟಎನ್ನುವುದಕ್ಕೆ ಇದು ಸಾಕ್ಷಿ- ಲೋಹಿತ್‌, ನಿರ್ದೇಶಕ

ಪಾರುಲ್‌ ಯಾದವ್‌ ಫಸ್ಟ್‌ ಲುಕ್‌ ಲಾಂಚ್‌ ಮಾಡಿ, ಬಾಲಕಿ ಐಶ್ವರ್ಯಗೆ ಶುಭ ಕೋರಿದರು. ‘ನಟನೆ ರಕ್ತದಲ್ಲೇ ಇದೆ. ನಟನೆಯ ಬಗ್ಗೆ ಐಶ್ವರ್ಯಗೆ ಹೇಳಿ ಕೊಡಬೇಕಿಲ್ಲ. ಆಕೆಯ ಮುಖದಲ್ಲಿ ಕಾಣುವ ಮಿಂಚು, ಸಿನಿಮಾ ಬಗೆಗಿನ ಆಸಕ್ತಿ, ಸಂತಸ ಎಲ್ಲವೂ ಆಕೆಯ ಸಿನಿಮಾ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತವೆ. ನಟಿಯಾಗಿ ಆಕೆಗೆ ಉಜ್ವಲವಾದ ಭವಿಷ್ಯವಿದೆ. ಒಳ್ಳೆಯದಾಗಲಿ’ ಅಂತ ಹಾರೈಸಿದರು. ಉಳಿದಂತೆ ಇದು ಅಮ್ಮ ಮಗಳ ಚಿತ್ರ. ಐಶ್ವರ್ಯ ಅವರು ಪ್ರಿಯಾಂಕ ಮಗಳ ಪಾತ್ರದಲ್ಲೇ ನಟಿಸುತ್ತಿದ್ದಾರೆ.

ನಂಗೆ ಕಾಮಿಡಿ ಸಿನಿಮಾ ಇಷ್ಟ. ಆದ್ರೆ ಲೋಹಿತ್‌ ಅಂಕಲ್‌ ಬಂದು ಕತೆ ಹೇಳಿ, ನಿಂದು ಇಂತಹ ಪಾತ್ರ, ಹೀಗಿರುತ್ತೆ ಅಂತ ಅಮ್ಮ ಮತ್ತು ನನ್ನ ಹತ್ತಿರ ಹೇಳಿದ್ರು. ತುಂಬಾ ಖುಷಿ ಆಯ್ತು. ಹಾಗಲ್ಲ, ಹೀಗೆ ಅಂತ ಹೇಳಿಕೊಟ್ರು. ಅಮ್ಮ ಹತ್ತಿರವೇ ಇರುತ್ತಿದ್ದರು. ಆರಂಭದಲ್ಲಿ ಕಷ್ಟಅಂತ ಎನಿಸಿತು. ಲೋಹಿತ್‌ ಅಂಕಲ್‌ ಜತೆಗೆ ಎಷ್ಟುಸಿನಿಮಾ ಆದ್ರು ನಟಿಸುತ್ತೇನೆ. ಆ ಕಾನ್ಫಿಡೆನ್ಸ್‌ ಈಗ ಬಂತು - ಐಶ್ವರ್ಯ, ಉಪೇಂದ್ರ ಪುತ್ರಿ

ಪುತ್ರಿಯ ಸಿನಿಮಾ ಎಂಟ್ರಿಯ ಬಗ್ಗೆ ಉಪೇಂದ್ರ ನಗು ನಗುತ್ತಲೇ ಮಾತನಾಡಿದರು. ‘ಚಿನ್ನಿ (ಐಶ್ವರ್ಯ) ಇಷ್ಟುಬೇಗ ಬಣ್ಣ ಹಚ್ತಾಳೆ ಅಂತ ಅನ್ಕೊಂಡಿರಲಿಲ್ಲ. ಒಂದಿನ ಲೋಹಿತ್‌ ಬಂದು ಕತೆ ಹೇಳಿದ್ರು. ಆಗವರು ಪ್ರಿಯಾಂಕಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಒಮ್ಮೆ ನೀವು ಕತೆ ಕೇಳಿ, ಅವರು ಕೇಳಿದ್ದಾರೆ ಅಂದ್ರು. ಆಮೇಲೆ ಒಂದಷ್ಟುದಿನಗಳ ನಂತರ ಬಂದು ಮತ್ತೆ ಕತೆ ಹೇಳಿದ್ರು. ಆಗ ಕತೆಯಲ್ಲಿನ ಬಾಲಕಿ ಪಾತ್ರಕ್ಕೆ ಐಶ್ವರ್ಯ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಅಂದ್ರು. ಕತೆ ತುಂಬಾ ಚೆನ್ನಾಗಿತ್ತು. ಓಕೆ ಅಂದೆ. ಈಗ ನೋಡಿದರೆ ಚಿನ್ನಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾಳೆನ್ನುವ ಭರವಸೆ ಮೂಡುತ್ತಿದೆ’ ಅಂತ ಉಪೇಂದ್ರ ನಗುತ್ತಲೇ ಮಾತನಾಡಿ, ಪುತ್ರಿಗೆ ಶುಭ ಕೋರಿದರು.

ಚಿನ್ನಿ ಮಮ್ಮಿ ಚಿತ್ರದ ಸಂದರ್ಭದಲ್ಲೇ ಅಭಿನಯಿಸಬೇಕಿತ್ತು. ಆದರೆ ಆಗ ಪರೀಕ್ಷೆ ಸಮಯ, ಸಿನಿಮಾಕ್ಕೆ ಬೇಡ ಅಂತ ಸುಮ್ಮನಿದ್ದೆವು. ಈಗ ಲೋಹಿತ್‌ ಬಿಡಲಿಲ್ಲ. ಚಿತ್ರದಲ್ಲಿನ ಮಗಳ ಪಾತ್ರಕ್ಕೆ ಐಶ್ವರ್ಯ ಅಭಿನಯಿಸಲಿ ಅಂತ ಹಠ ಹಿಡಿದರು. ಬೇಡ ಎನ್ನಲಾಗಲಿಲ್ಲ. ತುಂಬಾ ಚೆನ್ನಾಗಿ ಅಭಿನಯಿಸಿದ್ದಾಳೆ. ಚಿತ್ರದಲ್ಲೂ ಆಕೆ ಮಗಳು. ಆ ಕಾರಣಕ್ಕೆ ಈ ಸಿನಿಮಾ ಎಮೋಷನಲ್‌ ಆಗಿ ತುಂಬಾ ಕನೆಕ್ಟ್ ಆಗುತ್ತೆ- ಪ್ರಿಯಾಂಕಾ ಉಪೇಂದ್ರ, ನಟಿ