ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೋನಾಸ್ ಚಿತ್ರಗಳು ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವ ಫೋಟೋ ಸಖತ್ ಟ್ರೋಲ್‌ಗೆ ಗುರುಯಾಗಿದೆ.  ಈ ಫೋಟೋ ತೆಗೆದವರು ಯಾರು ಎಂಬ ಪ್ರಶ್ನೆ ಎದ್ದಿದೆ.

ಬಾಲಿವುಡ್ ಸ್ಟಾರ್ ಪ್ರಿಯಾಂಕಾ ಛೋಪ್ರಾ ಮತ್ತು ಗಾಯಕ ನಿಕ್ ಜೊನಾಸ್ ಮದುವೆ ದೊಡ್ಡ ಸುದ್ದಿಯಾಗಿತ್ತು. ಇದೀಗ ಅವರ ಬೆಡ್ ರೂಂ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಅಮಲಾ ಪೌಲ್ ಕೈಯಲ್ಲಿ ಸಿಗರೇಟ್... ಇದು ಸಿನಿಮಾ ಶೂಟಿಂಗ್ ಅಲ್ಲ!

ಯಾರು ಈ ಬಗೆಯ ಚಿತ್ರ ತೆಗೆದಿದ್ದು।? ಪೋಟೋ ಗ್ರಾಫರ್‌ನನ್ನು ಬೆಡ್ ರೂಂ ನಲ್ಲೇ ಇಟ್ಟುಕೊಂಡಿದ್ದೀರಾ? ಎಂಬುದಾಗಿ ನೆಟ್ಟಿಗರು ವ್ಯಂಗ್ಯದ ಪ್ರಶ್ನೆ ಎಸೆದಿದ್ದಾರೆ. ಜೋಧಪುರದ ಉಮೈದ್ ಭವನದಲ್ಲಿ ಪ್ರಿಯಾಂಕ-ನಿಕ್ ಜೋನಸ್ ವಿವಾಹ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದಿತ್ತು.

ಆದರೆ ಮದುವೆ ಸಂಭ್ರಮ ಮುಗಿದ ಮೇಲೆ ಹೊರಗಡೆ ಅರ್ಧ ಗಂಟೆಗೂ ಅಧಿಕ ಕಾಲ ಪಟಾಕಿ ಸುಡಲಾಗಿತ್ತು. ಇದಕ್ಕೂ ಸಹ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

View post on Instagram