ತಳುಕು ಬಳುಕಿನ ಸುಂದರಿ ಪಿಗ್ಗಿಯ ಫಿಟ್ನೆಸ್ ಗುಟ್ಟೇನು ಗೊತ್ತಾ?

First Published 22, Jan 2018, 3:58 PM IST
Priyanka Fitness Secret
Highlights

ಪ್ರಿಯಾಂಕಾ ಚೋ ಬಾಲಿವುಡ್‌ಗಿಂತ ಹೆಚ್ಚಾಗಿ ಹಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಮೊನ್ನೆ ಮೊನ್ನೆ ‘ಕ್ವಾಂಟಿಕೋ’ ಟಿವಿ ಸೀರೀಸ್‌'ನ ಸಹನಟನಿಗೆ ಲಿಪ್‌ಟುಲಿಪ್ ಕಿಸ್ ಮಾಡೋ ಫೊಟೋ ಸಖತ್ ವೈರಲ್ ಆಗಿತ್ತು. ಇಂತಿಪ್ಪ ಪ್ರಿಯಾಂಕಾಳ ಫಿಟ್‌ನೆಸ್ ಗುಟ್ಟೇನು?

ನವದೆಹಲಿ (ಜ.22): ಪ್ರಿಯಾಂಕಾ ಚೋ ಬಾಲಿವುಡ್‌ಗಿಂತ ಹೆಚ್ಚಾಗಿ ಹಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಮೊನ್ನೆ ಮೊನ್ನೆ ‘ಕ್ವಾಂಟಿಕೋ’ ಟಿವಿ ಸೀರೀಸ್‌'ನ ಸಹನಟನಿಗೆ ಲಿಪ್‌ಟುಲಿಪ್ ಕಿಸ್ ಮಾಡೋ ಫೊಟೋ ಸಖತ್ ವೈರಲ್ ಆಗಿತ್ತು. ಇಂತಿಪ್ಪ ಪ್ರಿಯಾಂಕಾಳ ಫಿಟ್‌ನೆಸ್ ಗುಟ್ಟೇನು?

ಪಿಗ್ಗಿ ಡಯೆಟ್ ಹೆಂಗಿರುತ್ತೆ?

ಪ್ರಿಯಾಂಕ ಚೋಪ್ರಾಗೆ ಪಿಗ್ಗಿ ಅನ್ನೋ ಹೆಸ್ರಿಟ್ಟಿದ್ದು ಅಭಿಷೇಕ್ ಬಚ್ಚನ್. ಡಯೆಟ್ ಅಂತ ಸ್ಪೂನ್ ಅಳತೆಯಲ್ಲಿ ಅನ್ನ ತಿನ್ನೋ ನಟಿಯರ ನಡುವೆ, ಪ್ರಿಯಾಂಕ ಆ ಪಾಟಿ ತಿನ್ನುತ್ತಿದ್ದನ್ನು ಕಂಡು ಅಭಿ ಈಕೆಯನ್ನು ‘ಪಿಗ್ಗಿ ಚಾಪ್ಸ್’ ಅಂತ ಕರೆದ್ರು. ಬೆಳಗ್ಗೆ ಎರಡು ಮೊಟ್ಟೆ ಅಥವಾ ಓಟ್‌ಮೀಲ್‌ಅನ್ನು ಹಾಲಿನ ಜೊತೆಗೆ ಕುಡಿವ ಸುಂದರಿ, ಮಧ್ಯಾಹ್ನ 2 ಚಪಾತಿ ದಾಲ್, ತರಕಾರಿ ಸೇವಿಸುತ್ತಾರೆ. ಸಂಜೆ ಟರ್ಕಿ ಸ್ಯಾಂಡ್‌ವಿಚ್, ರಾತ್ರಿ ಸೂಪ್, ಗ್ರಿಲ್ಡ್ ಚಿಕನ್ ಅಥವಾ ಫಿಶ್. ಇದು ಪಿಗ್ಗಿ ಆಹಾರ ಕ್ರಮ. ಇದರ ನಡು ನಡುವೆ ಮಟನ್ ಬಿರಿಯಾನಿಯನ್ನು ಜೀವಬಿಟ್ಟು ತಿನ್ನೋ ಈ ಪಂಜಾಬಿ ಚೆಲುವೆ ಮನೆ ಊಟವನ್ನು ಬಹಳ ಇಷ್ಟಪಡುತ್ತಾರೆ. ಮನೆಯಲ್ಲಿ ಮಾಡೋ ಪರಾಠವನ್ನು ಪ್ರೀತಿಯಿಂದ ತಿಂತಾರೆ.

ಪ್ರಿಯಾಂಕಾ ವರ್ಕೌಟ್ 20 ನಿಮಿಷ ಟ್ರೆಡ್‌ಮಿಲ್‌ನಲ್ಲಿ ಓಡ್ತಾರೆ. ಪುಶ್‌ಅಪ್ಸ್, ಬೆಂಚ್ ಜಂಪ್ ಸೇರಿದಂತೆ ಹತ್ತಾರು ಬಗೆಯ ಎಕ್ಸರ್‌ಸೈಸ್ ಮಾಡ್ತಾರೆ.

ಸುಮಾರು 2 ಗಂಟೆ ಕಾಲ ಬೆಳಗಿನ ವರ್ಕೌಟ್ ಇರುತ್ತೆ. ಜಿಮ್‌ನಲ್ಲಿ ಯಂತ್ರಗಳ ಮೂಲಕ ಎಕ್ಸರ್‌ಸೈಸ್ ಮಾಡೋದು ಈಕೆಗೆ ಇಷ್ಟ ಇಲ್ಲ. ಓಡೋದು, ಯಂತ್ರಗಳ ಸಹಾಯ ಇಲ್ದೇ ಮಾಡುವ ಸಹಜ ವ್ಯಾಯಾಮ ಮಾಡೋದಿಷ್ಟ. ಅದ್ರಲ್ಲೂ ಯೋಗ ಅಂದರೆ ಅಚ್ಚುಮೆಚ್ಚು.

 

loader