ಪ್ರಿಯಾಂಕ ಚೋಪ್ರಾ ಹೊಸ ಡ್ರೆಸ್ ಸ್ಟೇಟ್‌ಮೆಂಟ್‌ಗೆ ಅಭಿಮಾನಿಗಳು ಸ್ಟನ್! ಆರ್‌ಎಸ್‌ಎಸ್ ಅಂಬಾಸಿಡರ್ ಆದ್ರಾ ಪ್ರಿಯಾಂಕ ಚೋಪ್ರಾ?
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಡಿಫರೆಂಟ್ ಡ್ರೆಸ್ ಸೆನ್ಸ್ ಮೂಲಕ ಗಮನ ಸೆಳೆಯುತ್ತಾರೆ. ಹೊಸ ಹೊಸ ರೀತಿಯ ಫ್ಯಾಷನ್ ಗಳನ್ನು ಹುಟ್ಟು ಹಾಕುತ್ತಾರೆ. ಕೊನೆಗೂ ಆರ್ ಎಸ್ ಎಸ್ ಖಾಕಿ ಚಡ್ಡಿಯನ್ನು ಬಿಟ್ಟಿಲ್ಲ.
ಪತಿ ನಿಕ್ ಜೋನಸ್ ಜೊತೆ ನ್ಯೂ ಯಾರ್ಕ್ ನಲ್ಲಿ ಅಪಾರ್ಟ್ ವೊಂದರಿಂದ ಹೊರ ಬೀಳುವಾಗ ಧರಿಸಿದ್ದ ಡ್ರೆಸ್ ಟ್ರೋಲಿಗರಿಗೆ ಆಹಾರವಾಗಿದೆ. ಕಪ್ಪು ಬಣ್ಣದ ಆಕರ್ಷಕವಾದ ಟಾಪ್ ಖಾಕಿ ಬಣ್ಣದ ಶಾರ್ಟ್ಸ್, ಕಪ್ಪು ಬಣ್ಣದ ಬೂಟ್ ಧರಿಸಿದ್ದರು. ಇದನ್ನು ಆರ್ ಎಸ್ ಎಸ್ ಯೂನಿಫಾರ್ಮ್ ಗೆ ಹೋಲಿಸಿ ಪಿಗ್ಗಿ ಕಾಲೆಳೆಯುತ್ತಿದ್ದಾರೆ.
ಆರ್ ಎಸ್ ಎಸ್ ರಾಯಭಾರಿಯಾಗಿ ಪ್ರಿಯಾಂಕ ಚೋಪ್ರಾ ಆಯ್ಕೆಯಾಗಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
