ಮುಂಬೈ: ದೀಪಿಕಾ ಹಾಗೂ ರಣವೀರ್‌ ಸಿಂಗ್‌ ವಿವಾಹದ ಮುಗಿದ ಬೆನ್ನಲ್ಲೇ, ಇದೀಗ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್‌ ಗಾಯಕ ನಿಕ್‌ ಜೋನ್ಸ್‌ ವಿವಾಹ ಕುರಿತ ಸುದ್ದಿಗಳು ಸದ್ದು ಮಾಡಲು ಆರಂಭಿಸಿವೆ. ದೀಪಿಕಾ- ರಣವೀರ್‌ ಮಾದರಿಯಲ್ಲೇ ಪ್ರಿಯಾಂಕಾ ಮತ್ತು ನಿಕ್‌ ಕೂಡಾ ಎರಡು ಸಂಪ್ರದಾಯಗಳ ರೀತಿಯಲ್ಲಿ ಮದುವೆಯಾಗಲಿದ್ದಾರೆ.

ಡಿ.2ಕ್ಕೆ ಜೋಧ್‌ಪುರದ ಉಮೇದ್‌ ಭಭವನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಹಾಗೂ ಡಿ.3ಕ್ಕೆ ಕ್ರೈಸ್ತ ಸಂಪ್ರದಾಯದಂತೆ ಮದುವೆ ನಡೆಯಲಿದೆ ಎನ್ನಲಾಗಿದೆ. ಈ ವಾರಾಂತ್ಯಕ್ಕೆ ನಿಕ್‌ ಜೋನ್ಸ್‌ ಭಾರತಕ್ಕೆ ಆಗಮಿಸಲಿದ್ದು, ಸಂಗೀತ್‌ ಸಮಾರಂಭದ ಸಿದ್ಧತೆ ನಡೆಸಲಿದ್ದಾರೆ. ಪ್ರಿಯಾಂಕಾ ನ.28ರಂದು ವಿವಾಹ ನಡೆಯುವ ಸ್ಥಳಕ್ಕೆ ಆಗಮಿಸಲಿದ್ದಾರೆ. 

ನ.29ರಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಜರುಗಲಿವೆ. ಪ್ರಿಯಾಂಕಾ ಹಾಗೂ ನಿಕ್‌ ಅವರ ಸಂಗೀತ ಸಮಾರಂಭಕ್ಕೆ ಬಾಲಿವುಡ್‌ನ ಸಂಗೀತ ನಿರ್ದೇಶಕ ಗಣೇಶ್‌ ಹೆಗಡೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಪ್ರಿಯಾಂಕಾಗಾಗಿ ನಿಕ್‌ ಹಾಡುಗಳನ್ನು ಹೇಳಲಿದ್ದರೆ, ಪ್ರಿಯಾಂಕಾ ಹಾಡಿಗೆ ನಿಕ್‌ ಹೆಜ್ಜೆ ಹಾಕಲಿದ್ದಾರೆ.