ಬೆಂಗಳೂರು (ಜು. 18): ಗ್ಲೋಬಲ್ ಐಕಾನ್ ಪ್ರಿಯಾಂಕ ಚೋಪ್ರಾಗೆ ಹುಟ್ಟುಹಬ್ಬದ ಸಂಭ್ರಮ. ಇಂದು 36 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಪಿಗ್ಗಿ. 

ಮನೆಯವರಿಂದ ದೂರವುಳಿದು ಲಂಡನ್’ನಲ್ಲಿ ಪ್ರಿಯಕರ ಜಿಕ್ ಜೋನ್ಸ್ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಸೆಲಬ್ರೇಶನ್ ಫೋಟೋವನ್ನು ಹಂಚಿಕೊಂಡಿದ್ದಾರೆ. 

ಪ್ರಿಯಾಂಕ ಚೋಪ್ರಾ ಸಿನಿಮಾ ವಿಚಾರಗಳಿಗಿಂತ ಹೆಚ್ಚಾಗಿ ನಿಕ್ ಜೋನ್ಸ್ ಜೊತೆಗಿನ ಸಂಬಂಧದಿಂದಾಗಿ ಸುದ್ದಿಯಾಗಿದ್ದಾರೆ. ನಿಕ್ ಜೋನ್ಸ್ ಅಮೆರಿಕಾ ಮೂಲದ ಗಾಯಕರಾಗಿದ್ದು ಇವರಿಗಿಂತ 11 ವರ್ಷ ಚಿಕ್ಕವರಾಗಿದ್ದು ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿತ್ತು. 

ಈಗಾಗಲೇ ಹೇಳಿದಂತೆ ಪ್ರಿಯಕರ ಜೋನ್ಸ್ ಜೊತೆ ಲಂಡನ್’ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.