ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಗೆಳೆಯ ನಿಕ್ ಜೋನಾಸ್ ವಿವಾಹದ ಡೆಟ್ ಫಿಕ್ಸ್ ಆಗಿದ್ದು, ಅರಮನೆಯನ್ನೂ ಕೂಡ ಮದುವೆಗೆ ಆಯ್ಕೆ ಮಾಡಲಾಗಿದೆ. 

ನವದೆಹಲಿ: ಬಾಲಿವುಡ್‌ ಬೆಡಗಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೊನಾಸ್‌ ಜೋಡಿ ಡಿಸೆಂಬರ್‌ 2ರಂದು ರಾಜಸ್ಥಾನದ ಜೋಧ್‌ಪುರದಲ್ಲಿ ನವ ದಾಂಪತ್ಯಕ್ಕೆ ಕಾಲಿಡಲಿದೆ ಎಂದು ಹೇಳಲಾಗಿದೆ. 

ಜೋಧ್‌ಪುರದ ಪ್ರಸಿದ್ಧ ಉಮೇದ್‌ ಅರಮನೆಯಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ. 

ನವೆಂಬರ್‌ 30ರಂದು ಆರಂಭವಾಗಲಿರುವ ಚೋಪ್ರಾ ಮತ್ತು ನಿಕ್‌ ವಿವಾಹವು ಮೂರು ದಿನಗಳ ಕಾಲ ನಡೆಯಲಿದ್ದು, 200 ಮಂದಿ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗುತ್ತದೆ. 

ಆ.18ರಂದು ಈ ಜೋಡಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿತ್ತು.