ಮುಂಬೈ(ಸೆ.16): ನಟಿ ಪ್ರಿಯಾಂಕ ಚೋಪ್ರಾ ತನ್ನ ನಯವಾದ ಸುಂದರ ಕಾಲುಗಳು ಸುಮಾರು 12ರಿಂದ 15 ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮಾರುತ್ತಿವೆ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಆಕೆಯ ಕಾಲಿಗಿದೆ ಕೋಟಿ-ಕೋಟಿ ಬೆಲೆ.
ಅಮೆರಿಕಾದ ಮ್ಯಾಗಝೀನ್‌ವೊಂದಕ್ಕೆ ಸಂದರ್ಶನ ನೀಡಿರುವ ಪ್ರಿಯಾಂಕ, ಮೊದಲು ನನ್ನ ಕಾಲುಗಳು ಅಷ್ಟೊಂದು ಸುಂದರವಾಗಿರಲಿಲ್ಲ. ದಿನಕಳೆದಂತೆ ದೇಹ ಸೌಂದರ್ಯದ ಮಹತ್ವ ತಿಳಿದುಕೊಂಡು ಸೌಂದರ್ಯದ ಆರೈಕೆಗೆ ಮುಂದಾದೆ ಎಂದಿದ್ದಾರೆ.
ಅದರ ಫಲವಾಗಿ ಇಂದು ನನ್ನ ನಯವಾದ ಕಾಲುಗಳು, 12ರಿಂದ 15 ಸೌಂದರ್ಯ ವರ್ಧಕ ಉತ್ಪನ್ನ ಮಾರುತ್ತಿವೆ ಎಂದಿದ್ದಾರೆ. ಆಕೆಯ ಕಾಲಿನಿಂದಲೇ ಆಕೆಗೆ ಸುಮಾರು 20ಕೋಟಿಗೂ ಅಧಿಕ ಆದಾಯ ಹರಿದುಬರುತ್ತಿದೆಯಂತೆ.
