ಮುಂಬೈನಲ್ಲೇ ಇರುವ ಪ್ರಿಯಾಂಕ ಪ್ಯಾರ್ ಯಾರು..?

First Published 10, Jun 2018, 12:34 PM IST
Priyanka Chopra and rumoured boyfriend
Highlights

ತಾರೆಯರ ಜೀವನದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಪ್ರಿಯಾಂಕಗೆ ನಿಕ್ ಮೇಲೆ ಲವ್ವಾಗಿದ್ದರೂ ಅಚ್ಚರಿ ಇಲ್ಲ ಎಂದುಕೊಳ್ಳುವಾಗಲೇ ಪ್ರಿಯಾಂಕ ಆಪ್ತ ಗೆಳತಿಯೊಬ್ಬರು ಇದೆಲ್ಲಕ್ಕೂ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. 

ಮುಂಬೈ :  ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜಾನ್ಸ್ ಮೀಟಿಂಗ್,ಡೇಟಿಂಗ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸೋಷಲ್ ಮೀಡಿಯಾಗಳಲ್ಲೂ ಇಬ್ಬರು ಸಖತ್ ಹವಾ ಎಬ್ಬಿಸಿದ್ದಾರೆ ಎನ್ನುತ್ತಿದ್ದಂತೆಯೇ ಮೂವತ್ತೈದು ವರ್ಷದ ಪ್ರಿಯಾಂಕ, ಇಪ್ಪತ್ತೈದು ವರ್ಷದ ನಿಕ್ ಎಲ್ಲಿಂದೆಲ್ಲಿಯ ಅನುಬಂಧ ಎಂದು ಕೆಲವರು ಅಂದುಕೊಂಡು ಸುಮ್ಮನಿದ್ದರು. 

ಇದಾಗುತ್ತಿದ್ದಂತೆಯೇ ಈ ಜೋಡಿ ವಿದೇಶಗಳಲ್ಲೆಲ್ಲಾ ಜೊತೆಯಾಗಿ ತಿರುಗಾಡಿ ಒಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸೋಷಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿತ್ತು. ಆಗ ತಾರೆಯರ ಜೀವನದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಪ್ರಿಯಾಂಕಗೆ ನಿಕ್ ಮೇಲೆ ಲವ್ವಾಗಿದ್ದರೂ ಅಚ್ಚರಿ ಇಲ್ಲ ಎಂದುಕೊಳ್ಳುವಾಗಲೇ ಪ್ರಿಯಾಂಕ ಆಪ್ತ ಗೆಳತಿಯೊಬ್ಬರು ಇದೆಲ್ಲಕ್ಕೂ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. 

‘ಪ್ರಿಯಾಂಕ ತುಂಬಾ ಫ್ರೆಂಡ್ಲಿ ಗರ್ಲ್. ಯಾರನ್ನೇ ಆಗಲಿ ತುಂಬಾ ಹತ್ತಿರದವರಂತೆ ಕಾಣುತ್ತಾಳೆ. ಹಾಗಾಗಿಯೇ ಅವಳು ನಿಕ್ ಜಾನ್ಸ್ ಜೊತೆಗೆ ಬಹಳ ಆತ್ಮೀಯವಾಗಿ ಇದ್ದಾಳೆ. ಆದರೆ ಅದಕ್ಕೆ ಪ್ರೀತಿಯ ಬಣ್ಣ ಬಳಿಯುವುದು ಸರಿಯಲ್ಲ. ಅವಳ ಜೀವ ಇರುವುದು  ಮುಂಬೈನಲ್ಲಿ. ಇಲ್ಲಿಯೇ ಅವಳಿಗೆ ಪ್ರೀತಿ ಇದೆ. ಅದನ್ನು ಬಿಟ್ಟು ಅವಳು ಬೇರೆ ಎಲ್ಲೂ ಗಮನ ನೀಡುವುದಿಲ್ಲ’ ಎಂದು ಹೇಳಿದ್ದಾರೆ. ಈಗ ಮುಂಬೈನಲ್ಲಿ ಇರುವ ಪ್ರಿಯಾಂಕಾ ಪ್ಯಾರ್ ಯಾರು ಎನ್ನುವ ಪ್ರಶ್ನೆ ಹುಟ್ಟಿದೆ. 

loader