ಬಹುನಿರೀಕ್ಷಿತ ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಸುದೀಪ್ ಸಿಕ್ಕಾಪಟ್ಟೆ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ. ಪೈಲ್ವಾನ್ ಲುಕ್ ನಲ್ಲಿ ಅವರನ್ನು ನೋಡಿದರೆ ಥ್ರಿಲ್ ಆಗುವಂತಿದೆ. ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದು ಎದ್ದು ಕಾಣುತ್ತದೆ. ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. 

ಹೊಸ ಪೋಸ್ಟರನ್ನು ಶೇರ್ ಮಾಡಿಕೊಂಡು, ನನ್ನ ಮೇಲೆ ನಂಬಿಕೆ ಇಟ್ಟವರಿಗೆ ಹಾಗೂ ನಾನು ನಂಬಿದವರಿಗೆ ಥ್ಯಾಂಕ್ಸ್ ಎಂದು ಬರೆದುಕೊಂಡಿದ್ದಾರೆ. 

 

ಕಿಚ್ಚ ಸುದೀಪ್ ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಸುದೀಪ್ ಪತ್ನಿ ಪ್ರಿಯಾ ಟ್ವೀಟ್ ಮಾಡಿದ್ದು ಗಮನ ಸೆಳೆದಿದೆ. ಏನಾದರೂ ಸಾಧಿಸಬೇಕು ಎನ್ನುವ ಛಲ ಅವರ ಮನಸ್ಸಿನಲ್ಲಿದೆ. ನನಗೆ ಹೆಮ್ಮೆ ಎನಿಸುತ್ತಿದೆ. ಪೋಸ್ಟರ್ ತುಂಬಾ ಬ್ರಿಲಿಯಂಟಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ. 

ಪ್ರಿಯಾ ಟ್ವೀಟ್ ಗೆ ಸುದೀಪ್ ಪ್ರತಿಕ್ರಿಯಿಸಿದ್ದು, ನನಗೆ ಯಾವಾಗಲೂ ಸ್ಫೂರ್ತಿ ನೀಡುವ ಪ್ರಿಯಾ ಹಾಗೂ ಸಾನೂಗೆ ಥ್ಯಾಂಕ್ಸ್ ಎಂದಿದ್ದಾರೆ. 

ಪೈಲ್ವಾನ್ ಪೋಸ್ಟರ್ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ.