ತಮ್ಮ ಮೊದಲ ಚಿತ್ರದ ಟೀಸರ್‌ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಧೂಳೆಬ್ಬಿಸಿರುವ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌, ಪದ್ಮಾವತ್‌ ಚಿತ್ರದ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರ ಜತೆ ಕೆಲಸ ಮಾಡಬೇಕೆಂಬ ಮಹದಾಸೆಯಿದೆ ಎಂದು ಹೇಳಿಕೊಂಡಿದ್ದಾರೆ.

ನವದೆಹಲಿ: ತಮ್ಮ ಮೊದಲ ಚಿತ್ರದ ಟೀಸರ್‌ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಧೂಳೆಬ್ಬಿಸಿರುವ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌, ಪದ್ಮಾವತ್‌ ಚಿತ್ರದ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರ ಜತೆ ಕೆಲಸ ಮಾಡಬೇಕೆಂಬ ಮಹದಾಸೆಯಿದೆ ಎಂದು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಂಗಳವಾರ ಮಾತನಾಡಿದ ನಟಿ ವಾರಿಯರ್‌, ‘ನನಗೆ ಮಲಯಾಳಂ, ಕಾಲಿವುಡ್‌ ಮತ್ತು ಬಾಲಿವುಡ್‌ನಿಂದ ಯಥೇಚ್ಛವಾದ ಆಫರ್‌ಗಳು ಬರುತ್ತಿವೆ. ಆದರೆ, ಇದುವರೆಗೂ ನಾನು ಯಾವುದೇ ಚಿತ್ರಕ್ಕೂ ಸಹಿ ಹಾಕಿಲ್ಲ. ಆದರೆ, ಸಂಜಯ್‌ ಲೀಲಾ ಬನ್ಸಾಲಿ ಅವರ ಜತೆ ಕೆಲಸ ಮಾಡಬೇಕೆಂಬ ಆಸೆ ಇದೆ,’ ಎಂಬ ತಮ್ಮ ಮನದ ಇಂಗಿತವನ್ನು ಹೇಳಿದ್ದಾರೆ.

ಗೂಗಲ್‌ನಲ್ಲಿ ಸನ್ನಿಲಿಯೋನ್‌ಗೆ ಪ್ರಿಯಾ ಸಡ್ಡು!

ನವದೆಹಲಿ: ಆನ್‌ಲೈನ್‌ ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್‌ಹಿಟ್‌ ಆಗಿರುವ ನೂತನ ನಟಿ ಪ್ರಿಯಾ ಪ್ರಕಾಶ್‌, ಇದೀಗ ಗೂಗಲ್‌ನಲ್ಲಿ ಖ್ಯಾತ ನಟಿ ಸನ್ನಿ ಲಿಯೋನ್‌ರನ್ನು ಹಿಂದಿಕ್ಕಿದ್ದಾರೆ. ಮಲೆಯಾಳಂದ ಚಿತ್ರದ ಟೀಸರ್‌ ಬಿಡುಗಡೆ ಬೆನ್ನಲ್ಲೇ, ಗೂಗಲ್‌ ಸಚ್‌ರ್‍ ಇಂಜಿನ್‌ನಲ್ಲಿ ಅತಿಹೆಚ್ಚು ಶೋಧಿಸಲ್ಪಟ್ಟನಾಯಕಿಯರ ಪೈಕಿ ಪ್ರಿಯಾ ಪ್ರಕಾಶ್‌ ಅಗ್ರ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಈ ಹಿಂದೆ ಅತಿಹೆಚ್ಚು ಶೋಧಿಸಲ್ಪಡುತ್ತಿದ್ದ ಸನ್ನಿ ಲಿಯೋನ್‌, ಕತ್ರಿಕಾ ಕೈಫ್‌, ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ ಅವರನ್ನು ಹಿಂದಿಕ್ಕಿದ್ದಾರೆ.