ಸಾಮಾನ್ಯವಾಗಿ ಧಾರ್ಮಿಕ ವ್ಯಕ್ತಿಗಳು ಮೋಜು ಮಸ್ತಿಯಲ್ಲಿ ತೊಡಗಿಸಿಕೊಳ್ಳುವುದು ವಿರಳ. ಕೇರಳ ಚರ್ಚಿನ ಪಾದ್ರಿಯೊಬ್ಬರ ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲ ಯುವಕ-ಯುವತಿಯರು ಫ್ಲ್ಯಾಶ್ ಮಾಬ್ ಡ್ಯಾನ್ಸ್ ನಡೆಯುತ್ತಿರುವಾಗ ಕೊಚ್ಚಿಯ ವೈಪಿನ’ನಲ್ಲಿರುವ ಚರ್ಚ್’ನ ಪಾದ್ರಿ ಫಾ. ಮರ್ಟನ್ ಡಿಸಿಲ್ವ ಕೂಡಾ ಅವರೊಂದಿಗೆ ಸೇರಿ ಕುಣಿಯಲು ಆರಂಭಿಸಿದ್ದಾರೆ. ಅವರ ಡ್ಯಾನ್ಸ್’ನ ಶೈಲಿ ಹಾಗೂ ನಿಖರತೆ ವೀಕ್ಷಕರನ್ನು ಬೆರಗುಗೊಳಿಸಿದೆ. ಶೈನಿ ಆಂಥೋಣಿ ಎಂಬವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.