ಅರ್ಜುನ್ ಸರ್ಜಾ ಮಗಳು, ಚಂದನ್ ನಟಿಸಿದ ಪ್ರೇಮ ಬರಹ ಟ್ರೈಲರ್ ರಿಲೀಸ್

First Published 26, Jan 2018, 7:16 PM IST
Prema Baraha trailer released
Highlights

ಪ್ರಸಿದ್ಧ ನಟ ಅರ್ಜುನ್ ಸರ್ಜಾ ಮಗಳು ಐಶ್ವರ್ಯಾಳನ್ನು ಪರಿಚಯಿಸುತ್ತಿರುವ 'ಪ್ರೇಮ ಬರಹ' ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಈ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಚಿತ್ರ ರಸಿಕರಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ.

ಪ್ರಸಿದ್ಧ ನಟ ಅರ್ಜುನ್ ಸರ್ಜಾ ಮಗಳು ಐಶ್ವರ್ಯಾಳನ್ನು ಪರಿಚಯಿಸುತ್ತಿರುವ 'ಪ್ರೇಮ ಬರಹ' ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಈ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಚಿತ್ರ ರಸಿಕರಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ.

ಯುದ್ಧ, ಮಾಧ್ಯಮ ವರದಿಗಳ ನಡುವೆ ನವಿರಾದ ತಾಯಿ ಮಕ್ಕಳ ಬಾಂಧವ್ಯ ಹಾಗೂ ಯುವ ಪ್ರೇಮಿಗಳ ಪ್ರೀತಿ ಈ ಚಿತ್ರದಲ್ಲಿ ಅನಾವರಣಗೊಂಡಂತೆ ಟ್ರೈಲರ್ ನೋಡಿದರೆ ಭಾಸವಾಗುತ್ತದೆ. ಸೈನಿಕರ ಮೇಲೆ ಗೌರವ ಹುಟ್ಟಿಸುವಂಥ ಸಂಭಾಷಣೆಗಳಿದ್ದು, ದೇಶ ಕಾಯುತ್ತಿರುವ ಯೋಧರೂ ಬಗ್ಗೆಯೂ ಚಿತ್ರ ಗೌರವ ಹೆಚ್ಚಿಸಲಿದೆ ಎಂದೆನಿಸುತ್ತಿದೆ.

ಸರ್ಜಾ ಅವರೇ ನಿರ್ದೇಶಿಸಿದ ಈ ಚಿತ್ರದಲ್ಲಿ ಮಗಳು ನಾಯಕಿಯಾಗಿ ಅಭಿನಯಿಸುತ್ತಿದ್ದರೆ, ಕಿರುತೆರೆ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟು, ಬಿಗ್ ಬಾಸ್ ಮೂಲಕ ಖ್ಯಾತರಾದ ಚಂದನ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿದ್ದಾನೆ.

ಮಗಳ ನಟನೆ ಬಗ್ಗೆ ಸರ್ಜಾ ತೃಪ್ತರಾಗಿರುವುದಾಗಿ ಹೇಳಿಕೊಂಡಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಚಿತ್ರ ಏಕಕಾಲಕ್ಕೆ ಮೂಡಿ ಬರಲಿದೆ.

loader