ರಣಾಂಗಣದಲ್ಲಿ ಪ್ರೇಮಾಯಣ; ಪ್ರೇಕ್ಷಕರ ಮನ ಗೆಲ್ಲುತ್ತಾ 'ಪ್ರೇಮ ಬರಹ'?

Prema Baraha Kannada Movie Review
Highlights

ಕಾರ್ಗಿಲ್  ಎಂಬ ಎರಡು  ದೇಶಗಳ ನಡುವಿನ ಮತ್ಸರದಲ್ಲಿ ಸತ್ತು ಬದುಕಿದವರು, ಬದುಕಿ ಸತ್ತವರ ಲೆಕ್ಕವಿಟ್ಟವರಿಲ್ಲ. ಆದರೆ, ಈ ಯುದ್ಧವನ್ನು ಹಿನ್ನೆಲೆಯಾಗಿಟ್ಟು ಕೊಂಡು ಸಾಕಷ್ಟು ಸಿನಿಮಾಗಳು ತೆರೆ ಮೇಲೆ ಮೂಡಿವೆ.

ಬೆಂಗಳೂರು (ಫೆ.10): ಕಾರ್ಗಿಲ್  ಎಂಬ ಎರಡು  ದೇಶಗಳ ನಡುವಿನ ಮತ್ಸರದಲ್ಲಿ ಸತ್ತು ಬದುಕಿದವರು, ಬದುಕಿ ಸತ್ತವರ ಲೆಕ್ಕವಿಟ್ಟವರಿಲ್ಲ. ಆದರೆ, ಈ ಯುದ್ಧವನ್ನು ಹಿನ್ನೆಲೆಯಾಗಿಟ್ಟು ಕೊಂಡು ಸಾಕಷ್ಟು ಸಿನಿಮಾಗಳು ತೆರೆ ಮೇಲೆ ಮೂಡಿವೆ.

ಕನ್ನಡ ದಲ್ಲಿ ಆರ್ಮಿ ಕ್ಯಾಂಪ್'ನೊಳಗೆ ಕನ್ನಡ ಸಿನಿಮಾ ಪರದೆ ಪ್ರಭಾವಿಯಾಗಿ ಪ್ರಯಾಣ  ಬೆಳೆಸದಿದ್ದರೂ ಬಂದ ಒಂದೆರಡು  ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟವಾಗಿವೆ. ‘ಪ್ರೇಮಬರಹ’ ದ ಕತೆಯ ಮೂಲವೂ ಇದೇ. ಹೀಗಾಗಿ ಚಿತ್ರ ದ ಹೆಸರು ನೋಡಿ ಇ ದೊಂದು ಸಾಮಾನ್ಯ  ಸ್ಟೋರಿ ಎಂದುಕೊಂಡು ಹೋದವರ ಊಹೆಯನ್ನು ಯುದ್ಧ ಭೂಮಿಯ (ಕಲ್ಲು ಕ್ವಾರಿ) ಹಾರ್ವೆ ಚಟುವಟಿಕೆಗಳು ಉಲ್ಟಾ ಮಾಡುತ್ತವೆ!

ಯುದ್ಧ, ಅದರ ರೀತಿ, ಫ್ಯಾಮಿಲಿ, ಸುಹಾಸಿನಿ ಎಂದಾಕ್ಷಣ ‘ಮುತ್ತಿನ ಹಾರ’ ಚಿತ್ರವನ್ನು ನೆನಪು ಮಾಡಿಕೊಂಡರೆ ಸಿ ನಿಮಾ ಶುರುವಾಗಿ ಹತ್ತೇ  ನಿಮಿಷಕ್ಕೆ  ನಿರಾಸೆ  ನಿಮ್ಮನ್ನು  ಗಟ್ಟಿಯಾಗಿ ಅಪ್ಪಿಕೊಳ್ಳುತ್ತ ದೆ. ಇದು ಅರ್ಜುನ್  ಸರ್ಜಾ  ನಿರ್ದೇಶನದ ಸಿನಿಮಾ, ಅವರ ಪುತ್ರಿ ನಟನೆಯ ಮೊದಲ ಕನ್ನಡ ಸಿನಿಮಾ.   ಹಾಡಿನ ಸಾಲು ಚಿತ್ರದ ಟೈಟಲ್,   ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಹಾಡಿಗೆ ನೃತ್ಯ... ಇತ್ಯಾದಿ ಲೆಕ್ಕಾಚಾರಗಳೊಂದಿಗೆ ಸಿನಿಮಾ ನೋಡುವಂತಿಲ್ಲ. ಆದರೆ, ಅರ್ಜುನ್ ಸರ್ಜಾ  ನಿರ್ದೇಶನದ ಚಿತ್ರ ಎನ್ನುವ ಕಾರಣಕ್ಕೆ ಸಿನಿಮಾ ನೋಡುವವರನ್ನು ಮಾತ್ರ ‘ಇದು ಎಂಥ  ಸಿನಿಮಾ, ಇಲ್ಲಿನ ಕತೆ ಏನು? ಯಾಕಿಷ್ಟು ಪೇಲವವಾಗಿ  ದೃಶ್ಯಗಳನ್ನು ಸಂಯೋಜಿಸಿ ದಾರೆ, ಕಂಟಿನ್ಯೂಟಿ ಕೂಡ ನೋಡಿಕೊಳ್ಳದಷ್ಟು ಅಸಂಬದ್ಧವಾಗಿ ಸಿನಿಮಾ ಸಾಗುತ್ತಿದೆಯಲ್ಲ’ ಎಂದು ಹತ್ತಾರು ಪ್ರಶ್ನೆಗಳು ಕಾಡಬಹು ದು. 199 ರಲ್ಲಿ ನಡೆಯುವ ಕಥೆ ಇದು. ಆಗ ಚಿತ್ರ ದ ನಾಯಕ ಮತ್ತು ನಾಯಕಿ  ಬೇರೆ ಬೇರೆ ವಾಹಿನಿಗಳವರು. ಇವರಿಬ್ಬರ ಭೇಟಿ ರಸ್ತೆ ಜಗಳದ ಮೂಲಕ. ಅಲ್ಲಿಂದ ಕಾರ್ಗಿಲ್ ಯುದ್ಧವನ್ನು ನೇರವಾಗಿ ವರದಿ ಮಾಡುವುದಕ್ಕೆ ಇಬ್ಬರು ಮುಂದೆ ಜತೆಯಾಗಿ ಪಯಣಿಸುತ್ತಾರೆ.  ಈ ನಡುವೆ ಇತ್ತ ನಾಯಕಿಗೆ  ಬೇರೊಬ್ಬರೊಂದಿಗೆ  ನಿಶ್ಚಿತಾರ್ಥವಾಗಿದೆ. ಇತ್ತ ಅಮ್ಮನಿಲ್ಲದ ನಾಯಕನಿಗೆ ಅಪ್ಪನೇ ಜಗತ್ತು. ಮುಂ ದೆ ಕ್ಲೈಮ್ಯಾಕ್ಸ್'ವರೆಗೂ ಕಾರ್ಗಿಲ್'ದೇ ಸದ್ದು.  ಭಾರತ ಗೆದ್ದು, ಪಾಕಿಸ್ತಾನ ಸೋಲುವ ಹೊತ್ತಿಗೆ ಇವರಿಬ್ಬರಲ್ಲಿ  ಪ್ರೀತಿ ಹುಟ್ಟಿಕೊಳ್ಳುತ್ತದೆ.  ದರೆ, ಯುದ್ಧದಂತೆ ಇವರ ಪ್ರೀತಿಯೂ  ಗೆಲ್ಲುತ್ತ ದೆಯೇ? ಎನ್ನುವ ಲಾಂಗ್ ಸ್ಟೋರಿ ನೋಡಲು ನಿಮಗೆ ತಾಳ್ಮೆ  ತುಂಬಾ  ಬೇಕು.

ಚಿತ್ರದಲ್ಲಿ ಹಾಡುಗಳು(ಕೇಳುವುದಕ್ಕಲ್ಲ, ನೋಡುವುದಕ್ಕೆ), ಸಾಹಸ  ದೃಶ್ಯಗಳು, ಒಂದಿಷ್ಟು ಕಾಮಿಡಿ ಡೈಲಾಗ್'ಗಳು, ಕ್ಲೈಮ್ಯಾಕ್ಸ್'ಗೂ ಮುನ್ನ ಬರುವ ಮಗನನ್ನು ಕಳೆದುಕೊಂಡ ಅಪ್ಪನ ಪಾತ್ರಧಾರಿ ಪ್ರಕಾಶ್  ರೈ ಅವರ ಭಾವುಕ ಮಾತುಗಳ ಹೊರತಾಗಿ ಹೇಳಿಕೊಳ್ಳುವಂತದ್ದು  ಏನೂ ಇಲ್ಲ. ಅಂಜನೇಯನ ಹಾಡು ಯಾಕೆ ಬರುತ್ತ ದೆಂದು ಗೊತ್ತಿಲ್ಲ. ಇನ್ನೇನು ಸಿನಿಮಾ ಮುಗಿಯಿತು ಎಂ ದುಕೊಂಡ ಮೇಲೂ ಕಾಲು ಭಾಗದ ಸಿ ನಿಮಾ ಇದೆ ಎನ್ನುತ್ತದೆ ‘ಪ್ರೇಮಬರಹ’. ಚಿತ್ರ ದ ನಾಯಕ ಚಂದನ್  ಅವರಂತೂ ಕ್ರಿಕೆಟ್ ಟೀಂನ ಎಕ್ಸಾಟ್ರಾ ಪ್ಲೇಯರ್'ನಂತೆ ಸಿನಿಮಾ ಉದ್ದಕ್ಕೂ ಇದಾರೆ. ಐಶ್ವರ್ಯ,  ಅರ್ಜುನ್ ಅವರ ಪ್ರತಿಭೆ ಡ್ಯಾನ್ಸ್ ಹಾಗೂ ಪಟ ಪಟ ಅಂತ  ಸಂಭಾಷಣೆಗಳನ್ನು ಒಪ್ಪಿಸುವುದಕ್ಕೆ ಮಾತ್ರ ಸೀಮಿತವಾಗುತ್ತದೆ. ಸಾಧು ಕೋಕಿಲ ಹಾಗೂ ಕುರಿ ಪ್ರತಾಪ್ ಪಾತ್ರಗಳು ನಗಿಸುವ ಮೂಲಕ ಪ್ರೇಕ್ಷಕರನ್ನು ಒಂಚೂರು ಸಮಾಧಾನ ಮಾಡುತ್ತವೆ.

 

loader