5 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯೆ ನೀಡಿದ್ದರು. ಅದರಲ್ಲಿ 3 ಸಾವಿರಕ್ಕೂ ಮೇಲ್ಪಟ್ಟು ಓದುಗರು ಪ್ರಥಮ್ ಗೆಲ್ಲುವುದಾಗಿ ತಿಳಿಸಿದ್ದರು. ಉಳಿದ ಹೆಚ್ಚು ಅಭಿಪ್ರಾಯಗಳು ರೇಖಾ, ಕೀರ್ತಿಕುಮಾರ್ ಪರವಾಗಿ ಬಂದಿದ್ದವು.  ಪ್ರಥಮ್, ರೇಖಾ, ಕೀರ್ತಿಕುಮಾರ್, ಮೋಹನ್ ಮತ್ತು ಮಾಳವಿಕಾ ಫಿನಾಲೆಯ ಫೈನಲ್'ವರೆಗೂ ತಲುಪಿದ್ದರು. ಪ್ರಥಮ್  ಮಾತುಗಳು ಸಹ ಅನೇಕ ಸ್ಪರ್ಧಿಗಳಿಗೆ ತೀರಾ ಕಿರಿಕಿರಿ ಎನಿಸಿದರೂ ವೀಕ್ಷಕರಿಗೆ ಮೆಚ್ಚುಗೆಯಾಗಿದ್ದರು.

ಬೆಂಗಳೂರು(ಜ. 28): ಬಿಗ್'ಬಾಸ್ ಸೀಸನ್ 4 ವಿಜೇತರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುವರ್ಣ ಆನ್'ಲೈನ್ ನ್ಯೂಸ್ ನಡೆಸಿದ ಸಮೀಕ್ಷೆ ನಿಜವಾಗಿದ್ದು, ಪ್ರಥಮ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಬಿಗ್'ಬಾಸ್' ಫೈನಲ್'ನಲ್ಲಿ ಗೆಲುವು ಯಾರ ಮುಡಿಗೆ ಎಂಬುದರ ಬಗ್ಗೆ ಸುವರ್ಣ ಆನ್'ಲೈನ್ ನ್ಯೂಸ್ ಸಮೀಕ್ಷೆ ನಡೆಸಿತ್ತು.

5 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯೆ ನೀಡಿದ್ದರು. ಅದರಲ್ಲಿ 3 ಸಾವಿರಕ್ಕೂ ಮೇಲ್ಪಟ್ಟು ಓದುಗರು ಪ್ರಥಮ್ ಗೆಲ್ಲುವುದಾಗಿ ತಿಳಿಸಿದ್ದರು. ಉಳಿದ ಹೆಚ್ಚು ಅಭಿಪ್ರಾಯಗಳು ರೇಖಾ, ಕೀರ್ತಿಕುಮಾರ್ ಪರವಾಗಿ ಬಂದಿದ್ದವು. ಪ್ರಥಮ್, ರೇಖಾ, ಕೀರ್ತಿಕುಮಾರ್, ಮೋಹನ್ ಮತ್ತು ಮಾಳವಿಕಾ ಫಿನಾಲೆಯ ಫೈನಲ್'ವರೆಗೂ ತಲುಪಿದ್ದರು. ಪ್ರಥಮ್ ಮಾತುಗಳು ಸಹ ಅನೇಕ ಸ್ಪರ್ಧಿಗಳಿಗೆ ತೀರಾ ಕಿರಿಕಿರಿ ಎನಿಸಿದರೂ ವೀಕ್ಷಕರಿಗೆ ಮೆಚ್ಚುಗೆಯಾಗಿದ್ದರು.

ಇನ್ನು ರೇಖಾ ಅವರು ಬಿಗ್'ಬಾಸ್ ಮನೆಯಲ್ಲಿ ಫುಲ್ ಸೈಲೆಂಟ್. ಎಲ್ಲ ಟಾಸ್ಕ್'ಗಳಲ್ಲೂ ಉತ್ತಮವಾಗಿ ಆಟವಾಡಿದ್ದ ಕೀರ್ತಿ ಪ್ರಬಲ ಸ್ಪರ್ಧಿಯಾಗಿದ್ದರು. ಬಿಗ್'ಬಾಸ್ ಶೋನಲ್ಲಿ ಯಾರಿಗೂ ಕಿರಿಕಿರಿ ಉಂಟು ಮಾಡದೆ ಜಾಣ್ಮೆಯಿಂದ ಆಟವಾಡಿದ ಇವರು ಬಿಗ್'ಬಾಸ್'ನಲ್ಲಿ ವಿಜೇತರಾದರೆ ಶೋ'ಗೆ ನಿಜವಾದ ಗೌರವ ಎಂಬ ಅಭಿಪ್ರಾಯ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗಿದ್ದವು. ಬಿಗ್'ಬಾಸ್'ನ ಅನೇಕ ಮಾಜಿ ಕಂಟೆಸ್ಟೆಂಟ್'ಗಳೂ ಕೂಡ ಪ್ರಥಮ್ ಮತ್ತು ರೇಖಾಗೆ ಹೆಚ್ಚು ಒಲವು ವ್ಯಕ್ತಪಡಿಸಿದ್ದು ಗಮನಾರ್ಹ.