ಜೀ ಕನ್ನಡ ಆಯೋಜಿಸುವ ವೀಕೆಂಡ್ ವಿತ್ ರಮೇಶ್ ಸೀಜನ್ 3 ಆರಂಭವಾಗಿದೆ. ಈ ಸೀಜನ್'ನ ಮೊದಲ ಕಾರ್ಯಕ್ರಮದ ಅತಿಥಿಯಾಗಿ ಜನಪ್ರಿಯ ಬಹುಭಾಷಾ ನಟ, ಕನ್ನಡಿಗ ಪ್ರಕಾಶ್ ರೈ ಆಗಮಿಸಿದ್ದರು. ಕಳೆದ ಸೀಜನ್'ಗಳಂತೆ ಇಲ್ಲಿ ಅವರ ಬದುಕು ಹಾಗೂ ಅವರ ಸಾಧನೆಯನ್ನು ಅನಾವರಣಗೊಳಿಸಿದರು. ಒಟ್ಟಾರೆಯಾಗಿ ನಮಗೆ ತಿಳಿಯದ ಪ್ರಕಾಶ್ ರೈಯನ್ನು ಇಲ್ಲಿ ಪರಿಚಯಿಸಲಾಗಿತ್ತು. ಇದೇ ಸಂದರ್ಭದಲ್ಲಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ನಟ ಪ್ರಕಾಶ್ ರೈ ಭಾವುಕರಾಗಿದ್ದರು.
ಬೆಂಗಳೂರು(ಮಾ.27): ಜೀ ಕನ್ನಡ ಆಯೋಜಿಸುವ ವೀಕೆಂಡ್ ವಿತ್ ರಮೇಶ್ ಸೀಜನ್ 3 ಆರಂಭವಾಗಿದೆ. ಈ ಸೀಜನ್'ನ ಮೊದಲ ಕಾರ್ಯಕ್ರಮದ ಅತಿಥಿಯಾಗಿ ಜನಪ್ರಿಯ ಬಹುಭಾಷಾ ನಟ, ಕನ್ನಡಿಗ ಪ್ರಕಾಶ್ ರೈ ಆಗಮಿಸಿದ್ದರು. ಕಳೆದ ಸೀಜನ್'ಗಳಂತೆ ಇಲ್ಲಿ ಅವರ ಬದುಕು ಹಾಗೂ ಅವರ ಸಾಧನೆಯನ್ನು ಅನಾವರಣಗೊಳಿಸಿದರು. ಒಟ್ಟಾರೆಯಾಗಿ ನಮಗೆ ತಿಳಿಯದ ಪ್ರಕಾಶ್ ರೈಯನ್ನು ಇಲ್ಲಿ ಪರಿಚಯಿಸಲಾಗಿತ್ತು. ಇದೇ ಸಂದರ್ಭದಲ್ಲಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ನಟ ಪ್ರಕಾಶ್ ರೈ ಭಾವುಕರಾಗಿದ್ದರು.
ಆದರೆ ಇವೆಲ್ಲಕ್ಕಿಂತಲೂ ವಿಶೇಷವಾಗಿದ್ದುದು ಕಾರ್ಯಕ್ರಮದ ಕೊನೆಯಲ್ಲಿ ಪ್ರಕಾಶ್ ರೈ ಆಡಿದ ಮಾತುಗಳು. ತಾನು ಮಾಡಿದ ಸಾಧನೆಗೆ ಈ ಕನ್ನಡ ಮಣ್ಣು, ಇಲ್ಲಿನ ನುಡಿ ಹಾಗೂ ಸಾಹಿತ್ಯವೇ ಕಾರಣ, ನನ್ನ ಭೂಮಿಗೆ, ನನ್ನ ರಂಗಭೂಮಿಗೆ ಹಾಗೂ ಇಲ್ಲಿನ ಸಾಹಿತ್ಯಕ್ಕೆ ಧನ್ಯವಾದ' ಎಂಬುವುದನ್ನು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅದ್ಭುತ ಸಾಧನೆ ಮಾಡಿದ್ದರೂ ಜೀವನದಲ್ಲಿ ಸರಳತೆಗೆ ಮಹತ್ವ ನೀಡುವ ಈ ಕನ್ನಡಿಗನ ಮಾತು ನೀವೇ ಕೇಳಿ
ವಿಡಿಯೋ ಕೃಪೆ: ಝೀ ಕನ್ನಡ
