ಮಂಗಳೂರಿನ ಉದಯೋನ್ಮುಖ ನಟಿಗೆ ಚಾನ್ಸ್ ಕೊಡುಸ್ತಿನಿ ಎಂದು ನಂಬಿಸೋ ಪ್ರಯತ್ನ ಮಾಡಿದ್ದ. ಅದಲ್ಲದೆ ಚಾನ್ಸ್ ಬೇಕಾದರೆ ನಿರ್ದೇಶಕ ನಿರ್ಮಾಪಕರ ಜೊತೆ ಮಲಗಬೇಕು ಎಂದು ಫೆಸ್ಬುಕ್ನಲ್ಲಿ ಅಶ್ಲೀಲವಾಗಿ ಮೆಸೇಜ್ ಹಾಕಿದ್ದ
ಅಸಹ್ಯವಾಗಿ ಚಾಟ್ ಮಾಡಿದ ಕಾರಣ ನಟಿಯೊಬ್ಬಳು ನಿರ್ದೇಶಕನಿಗೆ ತರಾಟೆಗೆ ತೆಗೆದುಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಈಗಷ್ಟೆ ಚಿತ್ರರಂಗಕ್ಕೆ ಬಂದಿದ್ದ ನಟಿಗೆ ಚಂದ್ರಕಾಂತ್ ಸೊನ್ನದ್ ಎಂಬ ವ್ಯಕ್ತಿ ಕಿರುಕುಳ ನೀಡಿದ್ದ . ಈತ ಸಾಕ್ಷ್ಯ ಚಿತ್ರಗಳನ್ನ ನಿರ್ಮಿಸುವುದಲ್ಲದೆ ಖಾಸಗಿ ಚಾನಲ್ನಲ್ಲಿ ಉದ್ಯೋಗಿಯಾಗಿದ್ದಾನೆ.
ಮಂಗಳೂರಿನ ಉದಯೋನ್ಮುಖ ನಟಿಗೆ ಚಾನ್ಸ್ ಕೊಡುಸ್ತಿನಿ ಎಂದು ನಂಬಿಸೋ ಪ್ರಯತ್ನ ಮಾಡಿದ್ದ. ಅದಲ್ಲದೆ ಚಾನ್ಸ್ ಬೇಕಾದರೆ ನಿರ್ದೇಶಕ ನಿರ್ಮಾಪಕರ ಜೊತೆ ಮಲಗಬೇಕು ಎಂದು ಫೆಸ್ಬುಕ್ನಲ್ಲಿ ಅಶ್ಲೀಲವಾಗಿ ಮೆಸೇಜ್ ಹಾಕಿದ್ದ . ಇನ್ನು ಇದೇ ಚಂದ್ರಕಾಂತ್ ಸೊನ್ನದ್ ಈ ಹಿಂದೆ ರಾಘವೇಶ್ವರ ಶ್ರೀ ಪ್ರಕರಣದಲ್ಲಿ ಪ್ರೇಮಲತಾ ಪರವಾಗಿ ಮಾತನಅಡಿ ಹೆಣ್ಣು ಮಕ್ಕಳ ಪರ ಇದ್ದೀನಿ ಎಂದು ಒಂದಷ್ಟು ಸಂದೇಶಗಳನ್ನ ಹಾಕಿದ್ದ . ಈಗ ಈ ಕಾಮುಕನ ಬಣ್ಣ ಬಯಲಾಗಿದೆ . ಸದ್ಯ ನಟಿ ವಾಣಿಜ್ಯ ಮಂಡಳಿಗೆ ದೂರು ನೀಡುವ ಸಾಧ್ಯತೆ ಇದೆ.
