83 ಕೋಟಿ ಪಡೆದ್ರೂ ಹಾಕಳ್ಳೋಕೆ ಬಟ್ಟೆ ಸಿಗಲಿಲ್ವಾ? ರಿಹಾನಾ ಬಳಿಕ ಜಸ್ಟಿನ್ ಬೀಬರ್ ಟ್ರೋಲ್

ಸಂಗೀತ ಕಾರ್ಯಕ್ರಮ ವೇಳೆ ಜಸ್ಟಿನ್ ಬೀಬರ್ ಧರಿಸಿದ್ದ ಪ್ಯಾಂಟ್ ಪದೇ ಪದೇ ಜಾರುತ್ತಿತ್ತು. ಹಾಡುತ್ತಲೇ ಜಸ್ಟಿನ್ ಬೀಬರ್ ತಮ್ಮ ಪ್ಯಾಂಟ್ ಮೇಲೆರಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

pop singer justien bieber troll for his dress in social media mrq

ಮುಂಬೈ: ಪಾಪ್ ಗಾಯಕಿ ರಿಹಾನಾ ಬಳಿಕ ಗಾಯಕ ಜಸ್ಟಿನ್ ಬೀಬರ್ ತಮ್ಮ ಬಟ್ಟೆಯಿಂದ ಟ್ರೋಲ್ ಆಗುತ್ತಿದ್ದಾರೆ. ಇಬ್ಬರು ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಮಾರ್ಚ್ ತಿಂಗಳಲ್ಲಿ ನಡೆದ ವಿವಾಹಪೂರ್ವ ಸಮಾರಂಭಕ್ಕೆ ಆಗಮಿಸಿದ್ದ, ರಿಹಾನಾ ತಮ್ಮ ಸಂಗೀತ ಕಾರ್ಯಕ್ರಮಕ್ಕಾಗಿ ಲೋಡ್‌ಗಟ್ಟಲೇ ವಸ್ತುಗಳನ್ನು ತಂದಿದ್ದರು. ಆದ್ರೆ ಕಾರ್ಯಕ್ರಮ ನೀಡುತ್ತಿರುವ ಸಂದರ್ಭದಲ್ಲಿ ರಿಹಾನಾ ಧರಿಸಿದ್ದ ಹಸಿರು ಬಣ್ಣದ ಉಡುಪು ಕಂಕುಳ ಭಾಗದಲ್ಲಿ ಹರಿದಿತ್ತು. ಎಷ್ಟು ಕೋಟಿ ಕೋಟಿ ಸಂಭಾವನೆ ಪಡೆದುಕೊಂಡರೂ ಹರಿದ ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿ ಬಂತಾ ಎಂದು ಪ್ರಶ್ನಿಸಿ ರಿಹಾನಾ ಫೋಟೋವನ್ನು ಟ್ರೋಲ್ ಮಾಡಲಾಗಿತ್ತು. ಇದೀಗ ಪಾಪ್ ಗಾಯಕ, ಗ್ರ್ಯಾಮಿ ಪ್ರಶಸ್ತಿ ವಿಜೇತ ಜಸ್ಟೀನ್ ಬೀಬರ್ ತಾವು ಧರಿಸಿದ ಬಟ್ಟೆಯಿಂದ ಟ್ರೋಲರ್‌ಗಳಿಗೆ ಆಹಾರವಾಗಿದ್ದಾರೆ.

ಹೌದು, ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯ ಸಂಗೀತ್ ಕಾರ್ಯಕ್ರಮದಲ್ಲಿ ಜಸ್ಟಿನ್ ಬೀಬರ್ ಹಾಡು ಹೇಳಿ ಅತಿಥಿಗಳನ್ನು ರಂಜಿಸಿದ್ದರು. ಈ ಸಂಗೀತ ಕಾರ್ಯಕ್ರಮ ನೀಡಲು ಜಸ್ಟಿನ್ ಬೀಬರ್, ಬರೋಬ್ಬರಿ 83 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದೀಗ ಸಂಗೀತ ಕಾರ್ಯಕ್ರಮದ ಫೋಟೋ ಮತ್ತು ವಿಡಿಯೋಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನವಜೋಡಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಜೊತೆಯಲ್ಲಿಯೂ ಜಸ್ಟೀನ್ ಬೀಬರ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. 

ಪದೇ ಪದೇ ಜಾರುತ್ತಿತ್ತು ಜಸ್ಟಿನ್ ಪ್ಯಾಂಟ್

ಸಂಗೀತ ಕಾರ್ಯಕ್ರಮ ವೇಳೆ ಜಸ್ಟಿನ್ ಬೀಬರ್ ಧರಿಸಿದ್ದ ಪ್ಯಾಂಟ್ ಪದೇ ಪದೇ ಜಾರುತ್ತಿತ್ತು. ಹಾಡುತ್ತಲೇ ಜಸ್ಟಿನ್ ಬೀಬರ್ ತಮ್ಮ ಪ್ಯಾಂಟ್ ಮೇಲೆರಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಓರಿ ಸಹ ಖುಷಿಯಲ್ಲಿ ಕುಣಿಯುತ್ತಿರೋದನ್ನು ಗಮನಿಸಬಹುದು. ಈ  ವಿಡಿಯೋ ನೋಡಿದ ನೆಟ್ಟಿಗರು ಪ್ಯಾಂಟ್ ಸೊಂಟದ ಮೇಲೆ ಹಾಕಿಕೊಂಡರೆ ಕಳಚಲ್ಲ ಎಂದು ಟಾಂಟ್ ಕೊಟ್ಟಿದ್ದಾರೆ. ಕೆಲ ನೆಟ್ಟಿಗರು ಅದು ಜಸ್ಟಿನ್ ಬೀಬರ್ ಸ್ಟೈಲ್ ಎಂದು ಕಮೆಂಟ್ ಮಾಡಿದ್ದಾರೆ.

ಸಿಂಪಲ್ ಆದ್ರೆ ಸಿಕ್ಕಾಪಟ್ಟೆ ಕಾಸ್ಟ್ಲಿ

ಜಸ್ಟಿನ್ ಬೀಬರ್ ಧರಿಸಿದ್ದ ಬಟ್ಟೆ ಸಿಂಪಲ್ ಆಗಿ ಕಾಣಿಸುತ್ತಿದ್ದರೂ ಸಿಕ್ಕಾಪಟ್ಟೆ ದುಬಾರಿ ಮೌಲ್ಯದಾಗಿತ್ತು. ಸಡಿಲವಾದ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದ ಜಸ್ಟಿನ್ ಬೀಬರ್, ಮೇಲ್ಭಾಗದಲ್ಲಿ ಬಿಳಿ ಬಣ್ಣದ ಬಿನಿಯನ್, ಅದರ ಮೇಲೊಂದು ಜಾಕೆಟ್ ಧರಿಸಿದ್ದರು. ಆದ್ರೆ ಪ್ಯಾಂಟ್ ಒಳಗೆ ಧರಿಸಿದ್ದ ಶಾರ್ಟ್ಸ್‌ ಸಹ ಅರ್ಧ ಭಾಗದಷ್ಟು ಕಾಣಿಸುತ್ತಿತ್ತು. ಇದು ಸಹ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಅದು ರಸ್ತೆ ಬದಿಯಲ್ಲಿ ಸಿಗುವ ನೂರು ರೂಪಾಯಿ ಚಡ್ಡಿಯಂತಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಜಸ್ಟಿನ್ ಬೀಬರ್ ಬಟ್ಟೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ.

ಜಸ್ಟಿನ್‌ ಅವರು 2017ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದ್ದರು. ಅಮೆರಿಕದ ಲಾಸ್‌ ಏಂಜಲೀಸ್‌ ನಿವಾಸಿಯಾದ ಬೈಬರ್‌, ‘ಬೇಬಿ’, ‘ಸಾರಿ’, ‘ಲವ್ ಯುವರ್‌ ಸೆಲ್ಫ್‌’ ಹಾಗೂ ‘ಬಾಯ್‌ಫ್ರೆಂಡ್‌’ ಆಲ್ಬಂಗಳಿಂದ ಹೆಸರುವಾಸಿಯಾದವರು. 2 ಸಲ ಸಂಗೀತ ಕ್ಷೇತ್ರದ ಪ್ರಸಿದ್ಧ ‘ಗ್ರ್ಯಾಮಿ’ ಪ್ರಶಸ್ತಿಗೂ ಜಸ್ಟೀನ್ ಬೈಬರ್ ಪಾತ್ರರಾಗಿದ್ದಾರೆ. ಈ ಹಿಂದೆ ಜಾಮ್‌ನಗರದಲ್ಲಿ ನಡೆದ ಅನಂತ್‌-ರಾಧಿಕಾ ಅವರ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಪಾಪ್‌ ಗಾಯಕಿ ರಿಹಾನಾ ಅವರು ಹಾಡಿ ರಂಜಿಸಿದ್ದರು. ಅವರು 65 ರಿಂದ 75 ಕೋಟಿ ರು. ಪಡೆದಿದ್ದರು ಎನ್ನಲಾಗಿತ್ತು. 

 
 
 
 
 
 
 
 
 
 
 
 
 
 
 

A post shared by Revista ¡HOLA! (@holacom)

 
 
 
 
 
 
 
 
 
 
 
 
 
 
 

A post shared by @thewittyfolks

Latest Videos
Follow Us:
Download App:
  • android
  • ios