ಲವ್ವಲ್ಲಿ ಬಿದ್ದರು ಪೂನಂ ಪಾಂಡೆ – ಹುಡುಗ ಯಾರು ಗೆಸ್ ಮಾಡುವಿರಾ..?

First Published 12, Mar 2018, 3:05 PM IST
Poonam Pandey is in love
Highlights

ಪ್ರಸಿದ್ಧ ಹಾಟ್ ಮಾಡೆಲ್ ಆಗಿದ್ದ ಪೂನಂ ಪಾಂಡೆ ನಂತರ ನಟಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಇದೀಗ ಪೂನಂ ಪಾಂಡೆ ಬಗ್ಗೆ ಮತ್ತೊಂದು ವಿಚಾರ  ಹೊರಬಿದ್ದಿದೆ.

ನವದೆಹಲಿ : ಪ್ರಸಿದ್ಧ ಹಾಟ್ ಮಾಡೆಲ್ ಆಗಿದ್ದ ಪೂನಂ ಪಾಂಡೆ ನಂತರ ನಟಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಇದೀಗ ಪೂನಂ ಪಾಂಡೆ ಬಗ್ಗೆ ಮತ್ತೊಂದು ವಿಚಾರ  ಹೊರಬಿದ್ದಿದೆ. ಪೂನಂ ಪಾಂಡೆಗೆ ಲವ್ ಆಗಿದೆಯಂತೆ. ತನ್ನ ಪ್ರಿಯಕರನೊಂದಿಗೆ ಇರುವ ಫೊಟೊಗಳನ್ನು ಪೂನಂ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅನೇಕ ಬಾರಿ ವಿಶೇಷ ಕ್ಯಾಪ್ಶನ್’ಗಳಿರುವ ಫೊಟೊಗಳನ್ನು ಹಾಕಿ ಪಡ್ಡೆಗಳ ನಿದ್ದೆಗೆಡಿಸುತ್ತಿದ್ದ ಪೂನಂ ಪಾಂಡೆ ಇದೀಗ ತಾವು ಲವ್ವಲ್ಲಿ ಬಿದ್ದಿರುವುದಾಗಿ ಹೇಳಿಕೊಂಡಿದ್ದಾರೆ.

ಅಲ್ಲದೇ ಇನ್ಸ್’ಸ್ಟಾಗ್ರಾಮಲ್ಲಿ ಬಾಯ್ ಫ್ರೆಂಡ್  ಜೊತೆಗೆ ಇರುವ ಫೊಟೊಗಳನ್ನು ಹಾಕಿಕೊಂಡು  ಮೈ ಬೆಸ್ಟ್ ಬರ್ತ್ ಡೇ  ಪ್ರೆಸೆಂಟ್, ಐ ಲವ್ ಯು ಮೈ ಬಾಯ್ಫ್ರೆಂಡ್ @ಸ್ಯಾಮ್ ಬಾಂಬೇ ಎಂದು ಹಾಕಿಕೊಂಡಿದ್ದಾರೆ.

ನಿನ್ನೆ ತಮ್ಮ ಜನ್ಮ ದಿನವನ್ನು ಆಚರಣೆ ಮಾಡಿಕೊಂಡ ಪೂನಂ ಪಾರ್ಟಿಯಲ್ಲಿ ತೆಗೆದ ಫೊಟೊವನ್ನು ಅಪ್ಲೋಡ್ ಮಾಡಿದ್ದಾರೆ. ಆದರೆ ಆಕೆ ತನ್ನ ಬಾಯ್ ಫ್ರೆಂಡ್ ಬಗ್ಗೆ ಹೆಚ್ಚಿನ ಯಾವುದೇ ವಿಚಾರಗಳನ್ನೂ ಕೂಡ ರಿವೀಲ್ ಮಾಡಿಲ್ಲ. ಇದೇ ಮೊದಲ ಬಾರಿಗೆ ಪೂನಂ ತಮ್ಮ ಬಾಯ್’ಫ್ರೆಂಡ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ.

 

 

My best birthday present ever.. I love you my boyfriend ❤️ @sambombay

A post shared by Poonam Pandey (@ipoonampandey) on

loader