ಶಾಸಕ ಮುನಿರತ್ನ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ಮೇಲಿದ್ದ ಆರೋಪವೊಂದು ಸಾಕ್ಷಿ ಆಧಾರಗಳ ಕೊರತೆಯಿಂದ ಖುಲಾಸೆಯಾಗಿದೆ. 

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸೂಕ್ತ ಪುರಾವೆಗಳು ಸಿಗದ ಕಾರಣ ಕೇಸ್ ಖುಲಾಸೆಯಾಗಿದೆ. ಈ ಮೂಲಕ ಶಾಸಕ ಮುನಿರತ್ನಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

'ಕುರುಕ್ಷೇತ್ರ’ ತಡವಾಗಲು ನಿರ್ಮಾಪಕರು ಕೊಟ್ಟ 5 ಕಾರಣಗಳು

2013ರಲ್ಲಿ ಚುನಾವಣಾ ಅಕ್ರಮ ಎಸಗಿ ಚುನಾವಣಾ ಅಧಿಕಾರಿ ರವಿಕುಮಾರ್​​ಗೆ ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆಪ್ರಕರಣ ದಾಖಲಾಗಿತ್ತು. ಈಗ ಅಂತಿಮವಾಗಿ ಖುಲಾಸೆಯಾಗಿದೆ.

ಸಿನಿಮಾ ರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡು ನಂತರ ವರಾಜಕಾರಣಕ್ಕೆ ಬಂದ ಮುನಿರತ್ನ ಆರ್ ಆರ್‌ ನಗರದ ಶಾಸಕರಾಗಿ ಆಯ್ಕೆಯಾದರು. ಮುನಿರತ್ನ ನಿರ್ಮಾಣದ ಬಹು ನಿರೀಕ್ಷಿತ ಚಿತ್ರ ಕುರುಕ್ಷೇತ್ರ ಬಿಡುಗಡೆಗೆ ಸಿದ್ಧವಾಗಿದೆ..