ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ’ಪಿಎಂ ಮೋದಿ’ ಸಿನಿಮಾ ರಿಲೀಸ್ ಮಾಡಲು ಹೈ ಕೋರ್ಟ್ ಅನುಮತಿ ನೀಡಿದ್ದು ಇದಕ್ಕೆ ಚಿತ್ರ ತಂಡವೂ ಡೇಟ್ ಫಿಕ್ಸ್ ಮಾಡಿಕೊಂಡಿದೆ.

ಲೋಕಸಭಾ ಚುನಾವಣೆಯ ಬಿಸಿ ದೇಶಾದಾದ್ಯಂತ ಇದ್ದು ಮೋದಿ ಪರ ನಿಂತವರೇ ಹೆಚ್ಚು. ಇಂತಹ ಸಮಯದಲ್ಲಿ ಅವರ ಬಯೋಪಿಕ್ ರಿಲೀಸ್ ಮಾಡುವುದು ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂದು ವಕೀಲರು ವಿರೋಧ ವ್ಯಕ್ತಪಡಿಸಿದ್ದರು.

Add Asianetnews Kannada as a Preferred SourcegooglePreferred

‘ಪಿಎಂ ಮೋದಿ’ ಸಿನಿಮಾದಲ್ಲಿ ಯಾವುದೇ ಪಕ್ಷದ ಬಗ್ಗೆ ಇಲ್ಲ. ಹಾಗೂ ಯಾವ ಜಾತಿ, ವರ್ಗದವರನ್ನು ಕೆಳಮಟ್ಟದಲ್ಲಿ ತೋರಿಸಲಾಗಿಲ್ಲ. ಸಂಪೂರ್ಣವಾಗಿ ಮೋದಿ ಬಗ್ಗೆ ಇರುವ ಕಾರಣ ಸಿನಿಮಾವನ್ನು ರಿಲೀಸ್ ಮಾಡುವಂತೆ ಹೈ ಕೋರ್ಟ್ ಹೇಳಿದೆ.

ಪಿಎಂ ಮೋದಿ ಟ್ರೇಲರ್ ರಿಲೀಸ್: ಸಂಚಲನ ಮೂಡಿಸಿದೆ ವಿವೇಕ್ ಒಬೆರಾಯ್ ಲುಕ್!

ಇನ್ನು ಚಿತ್ರತಂಡ ವಿಷಯ ತಿಳಿಯುತ್ತಿದಂತೆ ರಿಲೀಸ್ ದಿನಾಂಕ ಫೈನಲ್ ಮಾಡಿಕೊಂಡಿದೆ. ಏಪ್ರಿಲ್ 5 ರಂದು ದೇಶಾದಾದ್ಯಂತ ‘ಪಿಎಂ ಮೋದಿ’ ರಿಲೀಸ್ ಆಗುತ್ತಿದೆ.