ಕಾಲಾ ಚಿತ್ರ ವಿವಾದ : ರಜಿನಿಕಾಂತ್’ಗೆ ನೋಟಿಸ್

First Published 25, Jan 2018, 9:23 AM IST
Plea against Rajinikanths Kaala Movie
Highlights

ಬಹುನಿರೀಕ್ಷಿತ ಕಾಲಾ ಚಿತ್ರದ ಶೀರ್ಷಿಕೆ ಮತ್ತು ಕತೆಯ ಹಕ್ಕುಸ್ವಾಮ್ಯ ವಿವಾದಕ್ಕೆ ಸಂಬಂಧಿಸಿದಂತೆ ನಟರಾದ ರಜನೀಕಾಂತ್, ಧನುಷ್, ನಿರ್ದೇಶಕ ಪಿ.ಎ. ರಂಜಿತ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಚೆನ್ನೈ: ಬಹುನಿರೀಕ್ಷಿತ ಕಾಲಾ ಚಿತ್ರದ ಶೀರ್ಷಿಕೆ ಮತ್ತು ಕತೆಯ ಹಕ್ಕುಸ್ವಾಮ್ಯ ವಿವಾದಕ್ಕೆ ಸಂಬಂಧಿಸಿದಂತೆ ನಟರಾದ ರಜನೀಕಾಂತ್, ಧನುಷ್, ನಿರ್ದೇಶಕ ಪಿ.ಎ. ರಂಜಿತ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸಹಾಯಕ ನಿರ್ದೇಶಕ ರಾಜಶೇಖರನ್ ಎನ್ನುವವರು ದಶಕದ ಹಿಂದೆಯೇ ತಾನು ಕಾಲಾ ಕರಿಕಾಲನ್ ಚಿತ್ರದ ನಾಯಕನಾಗಿ ಅಭಿನಯಿಸುವಂತೆ ರಜನಿ ಅವರನ್ನು ಕೇಳಿಕೊಂಡಿದ್ದೆ.

ಹೀಗಾಗಿ ಚಿತ್ರದ ಕತೆ ತನಗೆ ಸೇರಿದ್ದು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಫೆ.12ರ ಒಳಗಾಗಿ ನೋಟಿಸ್‌ಗೆ ಉತ್ತರಿಸುವಂತೆ ಕೋರ್ಟ್ ರಜನೀಕಾಂತ್ ಮತ್ತು ಇತರರಿಗೆ ತಿಳಿಸಿದೆ.

loader