‘ನೀರ್ ದೋಸೆ’ಯಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಹರಿಪ್ರಿಯಾಗೆ ನಿದ್ದೆ ಇಲ್ಲ ಅಂದ್ರೆ ನಂಬ್ತೀರಾ? ನಂಬಲೇಬೇಕು. ಯಾಕೆಂದರೆ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ದಿವಸಗಳ ಕಾಲ ಅವರು ಇತ್ತೀಚೆಗೆ ಸತತ ಕಣ್ತುಂಬ ನಿದ್ದೆ ಮಾಡಿಲ್ಲ! ಹಾಗೆ ಅವರು ನಿದ್ದೆಗೆಟ್ಟಿದ್ದು ಬಿಡುವಿಲ್ಲದ ಶೂಟಿಂಗ್ ಕಾರಣಕ್ಕೆ. ಮೊನ್ನೆಯಷ್ಟೇ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ‘ಲೈಫ್ ಜತೆ ಒಂದು ಸೆಲ್ಪಿ ’ ಚಿತ್ರದ ಮುಹೂರ್ತಕ್ಕೆ ಬಂದಾಗ ಅವರ ಮುಖ ಬಾಡಿತ್ತು. ಕಣ್ಣುಗಳಲ್ಲಿ ಆಯಾಸ ಮನೆ ಮಾಡಿತ್ತು. ಯಾಕೆ ಹೀಗೆ ಅಂತ ಕೇಳಿದಾಗ ‘ಚಿತ್ರೀಕರಣದ ಬಿಜಿ ಶೆಡ್ಯೂಲ್. ಓಡಾಟದಲ್ಲಿ ಮೂರು ದಿವಸ ನಿದ್ದೆ ಮಾಡಿಲ್ಲ. ಹಾಗಾಗಿ ಆಯಾಸವಾಗಿದೆ. ಕಣ್ಣು ಕೆಂಪಾಗಿವೆ’ ಅಂದರು.

‘ನೀರ್ ದೋಸೆ’ ನಂತರ ಸ್ಯಾಂಡಲ್‌ವುಡ್‌ನಲ್ಲೀಗ ಹರಿಪ್ರಿಯಾ ಸಿಕ್ಕಾಪಟ್ಟೆ ಬ್ಯುಸಿ. ಅವರ ಕೈಯಲ್ಲೀಗ ನಾಲ್ಕೆ‘ದು ಚಿತ್ರಗಳಿವೆ. ಅವೆಲ್ಲವೂ ಸ್ಟಾರ್ ಚಿತ್ರಗಳೇ. ಜತೆಗೆ ಅಷ್ಟೂ ಚಿತ್ರಗಳಲ್ಲಿ ಅವರು ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಅಷ್ಟು ಚಿತ್ರಗಳಿಗೂ ಈಗ ಚಿತ್ರೀಕರಣ ಶುರುವಾಗಿದೆ. ಚಿತ್ರೀಕರಣಕ್ಕಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ‘ಕುರುಕ್ಷೇತ್ರ’ ಚಿತ್ರದ ಚಿತ್ರೀಕರಣಕ್ಕಾಗಿ ಇತ್ತೀಚೆಗೆ ಅವರು ಹೈದ್ರಾಬಾದ್‌ನಲ್ಲಿದ್ದರು. ಅಲ್ಲಿಂದ ಬಂದಿದ್ದೇ ತಡ ‘ಕನಕ’ ಚಿತ್ರದ ಸೆಟ್‌ಗೆ ಹೋದರು. ಅದಕ್ಕಾಗಿ ನಿತ್ಯ ಶ್ರೀರಂಗಪಟ್ಟಣಕ್ಕೆ ಹೋಗಿ ಬರುತ್ತಿದ್ದರು. ಈ ಮಧ್ಯೆ 'ಭರ್ಜರಿ’ ಶೆಡ್ಯೂಲ್ ಶುರುವಾಯಿತು. ಕಳೆದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ‘‘ರ್ಜರಿ ’ಹಾಡಿನ ಚಿತ್ರೀಕರಣ ನಡೆಯಿತು. ಅತ್ತ ‘ಕನಕ ’ಚಿತ್ರೀಕರಣದಲ್ಲಿ ಅವರು ಬಿಜಿ ಆಗಿದ್ದರಿಂದ ‘ಭರ್ಜರಿ’ ಚಿತ್ರ ತಂಡ ಮೂರು ದಿವಸಗಳ ಕಾಲ ರಾತ್ರಿಯೇ ಚಿತ್ರೀಕರಣಕ್ಕೆ ಶೆಡ್ಯೂಲ್ ಫಿಕ್ಸ್ ಮಾಡಿತ್ತು. ಅದಕ್ಕಾಗಿ ಮೂರು ದಿವಸ ಶ್ರೀರಂಗಪಟ್ಟಣದಿಂದ ಬೆಂಗಳೂ ರಿಗೆ ಬಂದು ಹೋಗುವ ಪ್ರಯಾ ಣದಲ್ಲಿ ನಿದ್ದೆಯೇ ಮಾಡಿರಲಿಲ್ಲ ವಂತೆ ನಟಿ ಹರಿಪ್ರಿಯಾ.
ಶುಕ್ರವಾರ ‘ಕನಕ ’ಚಿತ್ರೀಕರಣಕ್ಕಾಗಿ ಅವರು ಶ್ರೀರಂಗಪಟ್ಟಣದಲ್ಲಿದ್ದರು. ದೂರವಾಣಿ ಮೂಲಕ ಅಲ್ಲಿಂದಲೇ ಮಾತಿಗೆ ಸಿಕ್ಕರು. ಚಿತ್ರೀಕರಣದ ದಣಿವನ್ನು ದೂರವಿಟ್ಟೆ ಮಾತನಾಡಿದರು. ‘ಆಸಕ್ತಿ ಇದೆ. ಹಾಗಾಗಿ ಆಯಾಸ ಲೆಕ್ಕವೇ ಇಲ್ಲ’ ಎನ್ನುವುದು ಅವರ ಮೊದಲ ಮಾತಾಗಿತ್ತು. ‘ಅವಕಾಶಗಳು ಹೇಳಿ ಕೇಳಿ ಸಿಗೋದಿಲ್ಲ. ಸಿಕ್ಕಾಗ ಸದ್ಬಳಕೆ ಮಾಡಿಕೊಳ್ಳಬೇಕು. ಹಾಗಂತ ಬಿಜಿ ಆಗಿರಬೇಕು ಅಂತಲ್ಲ. ಒಳ್ಳೆಯ ಪಾತ್ರಗಳು ಸಿಕ್ಕಾಗ ಅವುಗಳನ್ನು ಸಮರ್ಥವಾಗಿ ನಿ‘ಾಯಿಸಿ, ಒಳ್ಳೆಯ ನಟಿ ಅಂತ ಗುರುತಿಸಿಕೊಳ್ಳಬೇಕೆನ್ನುವ ಹಂಬಲ ನನ್ನದು. ಹೀಗಾಗಿ ಓಡಾಟದಲ್ಲಿ ಆಯಾಸವಿತ್ತು. ಅದೊಂದು ರೀತಿ ಖುಷಿಯ ಆಯಾಸ’ ಅಂದರು. ‘ಕನಕ’ ನಂತರ ‘ಸೂಜಿದಾರ’ ಶುರುವಾಗುತ್ತಿದೆ. ಅದಾದ ನಂತರ ‘ಲೈಫ್ ಜತೆ ಒಂದು ಸೆಲ್ಪಿ ’ಶೂಟಿಂಗ್. ಈ ಮಧ್ಯೆ ‘ಕುರುಕ್ಷೇತ್ರ’. ಬಿಡುವಿಲ್ಲದ ವೇಳಾ ಪಟ್ಟಿಯದು. ನಟನೆಯ ಜತೆಗೆ ಈಗ ಅದನ್ನು ಅವರೇ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರಂತೆ. ಪ್ರತ್ಯೇಕವಾಗಿ ಮ್ಯಾನೇಜರ್ ಅಂತ ಯಾರು ಇಲ್ಲ. ಜತೆಗೆ ಅಮ್ಮ ಇದ್ರೆ ಸಾಕು. ಎಲ್ಲವೂ ಸಲೀಸು ಅಂತಾರೆ ಹರಿಪ್ರಿಯಾ.