ಗಾಂಧಿ ಕೊಂದವರು ಅಧಿಕಾರದಲ್ಲಿ: ಗಂದಿ ಬಾತ್ ಬಂತು ಸ್ವರಾ ಬಾಯಲ್ಲಿ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Sep 2018, 9:54 PM IST
People Who Celebrated Mahatma Gandhi Assassination Are in Power Today: Swara Bhaskar
Highlights

ಗಾಂಧಿ ಕೊಂದವರು ಇಂದು ಅಧಿಕಾರದಲ್ಲಿದ್ದಾರೆ! ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಿವಾದಾತ್ಮಕ ಹೇಳಿಕೆ! ಗಾಂಧಿ ಕೊಂದವರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದ ಸ್ವರಾ
 

ಮುಂಬೈ(ಸೆ.1): ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರ ಹತ್ಯೆಯಾಗಿದ್ದ ವೇಳೆ ಸಂಭ್ರಮಿಸಿದ್ದವರು ಇಂದು ಅಧಿಕಾರದಲ್ಲಿದ್ದಾರೆ ಎಂದು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವರಾ ಭಾಸ್ಕರ್, ಈ ದೇಶದಲ್ಲಿ ಮಹಾತ್ಮಾ ಗಾಂಧಿ ಅವರಂತಹ ಮಹಾನ್ ವ್ಯಕ್ತಿಯ ಹತ್ಯೆ ಮಾಡಿದ್ದು ಈ ವೇಳೆ ಕೂಡ ಕೆಲವರು ಸಂಭ್ರಮಾಚರಣೆ ಮಾಡಿದ್ದರು. ಅಂತವರು ಇಂದು ಅಧಿಕಾರದಲ್ಲಿದ್ದು ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.

ಸ್ವರಾ ಭಾಸ್ಕರ್ ಈ ಹಿಂದೆ ನಮ್ಮದು ಹಿಪೊಕ್ರಸಿಯಿಂದ ಕೂಡಿದ ಸಮಾಜ ಎಂದು ಹೇಳಿಕೆ ನೀಡಿದ್ದರು. ಇದೇ ಅಲ್ಲದೆ ಹಸ್ತಮೈಥುನವೆಂದರೆ ನಮ್ಮ ದೇಹ ಮತ್ತು ಲೈಂಗಿಕತೆಯ ಮೇಲೆ ನಮ್ಮದೇ ಅಧಿಕಾರ ಎಂಬ ಹೇಳಿಕೆ ಕೂಡ ವಿವಾದ ಎಬ್ಬಿಸಿತ್ತು.

loader