ನಿನ್ನೆ ಸಂಜೆ ಅಪಾರ್ಟ್ಮೆಂಟ್ ಬಳಿಯೇ ಬೀದಿನಾಯಿಗಳು ದಾಳಿ ನಡೆಸಿವೆ. ನಿನ್ನೆ ಸಂಜೆ ವಾಕ್ ಮಾಡುತ್ತಿದ್ದಾಗ 6 ಬೀದಿ ನಾಯಿಗಳು ದಿಢೀರ್ ದಾಳಿ ಮಾಡಿವೆ. ಮುಂಬೈನ ಕೋಕಿಲ ಬೆನ್ ಆಸ್ಪತ್ರೆಯಲ್ಲಿ ಪಾರೂಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾರೂಲ್ ಅವರ ಮುಖ, ಕೈಕಾಲುಗಳಿಗೆ ನಾಯಿಗಳು ಕಚ್ಚಿವೆ. ತಲೆಯಲ್ಲಿ ಸುಮಾರು 3 ಸೆ.ಮೀ ಆಳದ ಗಾಯವಾಗಿದೆ. ನಿನ್ನೆ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ನಾಳೆ ಪಾರೂಲ್ ಯಾದವ್`ಗೆ ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆ ಇದೆ. ನಡುಬೀದಿಯಲ್ಲಿ ನಾಯಿಗಳು ಅಟ್ಯಾಕ್ ಮಾಡಿದರೂ ಯಾರೊಬ್ಬರೂ ಸಹಾಯಕ್ಕೆ ಬಾರದಿರುವ ಬಗ್ಗೆ ಪಾರೂಲ್ ಸಹೋದರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂಬೈ(ಜ.24): ಕನ್ನಡ ಖ್ಯಾತ ನಟಿ ಪಾರೂಲ್ ಯಾದವ್ ಮೇಲೆ ಬೀದಿನಾಯಿಗಳು ದಾಳಿ ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ನಿನ್ನೆ ಸಂಜೆ ವಾಕಿಂಗ್`ಗೆ ತೆರಳಿದ್ದ ಸಂದರ್ಭ ನಟಿ ಬೀದಿನಾಯಿಗಳಿಗೆ ಆಹಾರವಾಗಿದ್ದಾರೆ.

ನಿನ್ನೆ ಸಂಜೆ 5.30ರ ಸುಮಾರಿಗೆ ಅಪಾರ್ಟ್`ಮೆಂಟ್ ಬಳಿಯೇ ವಾಕ್ ಮಾಡುತ್ತಿದ್ದಾಗ 6 ಬೀದಿ ನಾಯಿಗಳು ದಿಢೀರ್ ದಾಳಿ ಮಾಡಿವೆ. ಪಾರೂಲ್ ಅವರ ಮುಖ, ಕೈಕಾಲುಗಳಿಗೆ ನಾಯಿಗಳು ಕಚ್ಚಿವೆ. ತಲೆಯಲ್ಲಿ ಸುಮಾರು 3 ಸೆ.ಮೀ ಆಳದ ಗಾಯವಾಗಿದೆ. ಮುಂಬೈನ ಕೋಕಿಲ ಬೆನ್ ಆಸ್ಪತ್ರೆಯಲ್ಲಿ ಪಾರೂಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಳೆ ಪಾರೂಲ್ ಯಾದವ್`ಗೆ ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆ ಇದೆ. ನಡುಬೀದಿಯಲ್ಲಿ ನಾಯಿಗಳು ಅಟ್ಯಾಕ್ ಮಾಡಿದರೂ ಯಾರೊಬ್ಬರೂ ಸಹಾಯಕ್ಕೆ ಬಾರದಿರುವ ಬಗ್ಗೆ ಪಾರೂಲ್ ಸಹೋದರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
