ಪಾಕ್ ನಟಿ ಸಬಾ ಖಮರ್ ಫೋಟೋಗೆ ಆಕ್ಷೇಪಕೈಯಲ್ಲಿ ಸಿಗರೇಟ್ ಹಿಡಿದಿದ್ದ ನಟಿ ಸಬಾಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೊಳಗಾದ ನಟಿಸಂಸ್ಕೃತಿ ವಿರುದ್ಧ ನಡೆ ಸಲ್ಲ ಎಂದು ಪಾಠ 

ಇಸ್ಲಾಮಾಬಾದ್(ಜು.26): ಬಾಲಿವುಡ್​ನ 'ಹಿಂದಿ ಮೀಡಿಯಂ' ಚಿತ್ರದ ನಟಿ ಸಬಾ ಅವರ ನ್ಯೂ ಫೋಟೋ ಶೂಟ್​ ಗೆ ಸಂಬಂಧಿಸಿದ ಫೋಟೋ ಲೀಕ್ ಆಗಿದೆ. ಅವರ ಒಂದು ಕೈಯಲ್ಲಿ ಸಿಗರೇಟಿದ್ದರೆ ಧರಿಸಿರುವ ಬಿಳಿ ಬಣ್ಣದ ಶರ್ಟ್​ ಮೇಲಿನ ಕೆಲ ಗುಂಡಿಗಳು ಕಳಚಿವೆ.

ಸಹಾಯಕಿ ಸಬಾ ಅವರ ಬ್ಲೆಜರ್​ ತೆಗೆಯುತ್ತಿದ್ದಾರೆ. ಮಾದಕತೆಯಿಂದ ಕೂಡಿದ ಈ ಲುಕ್​ ವೈರಲ್ ಆಗುತ್ತಿದ್ದರಂತೆ ಟ್ರೋಲಿಗರು ಸಬಾ ಅವರ ಮೇಲೆ ಮುಗಿ ಬಿದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ವಿರುದ್ಧ ಕಮೆಂಟ್​ಗಳನ್ನು ಮಾಡಿದ್ದಾರೆ.

View post on Instagram

ಇನ್ನು ಕೆಲ ಟ್ರೋಲಿಗರು ಸಬಾ ಅವರನ್ನು ಇನ್ನೊಬ್ಬ ಪಾಕ್ ನಟಿ ಮಹೀರಾ ಖಾನ್​ಗೆ ಹೋಲಿಸಿದ್ದಾರೆ. ಮಹೀರಾ, ಕೆಲ ದಿನಗಳ ಹಿಂದೆ ಪಬ್ಲಿಕ್​ನಲ್ಲೇ ಧೂಮಪಾನ ಮಾಡಿ ಸುದ್ದಿಯಾಗಿದ್ದರು. ಸಬಾ ಕೂಡ ಮಹೀರಾ ಅವರ ಹಾದಿಯನ್ನು ತುಳಿಯುತ್ತಿದ್ದಾರೆ. ಇದು ನಮ್ಮ ಸಂಪ್ರದಾಯಕ್ಕೆ ವಿರುದ್ಧ ಎಂದು ಸಖತ್ ತರಾಟೆ ತೆಗೆದುಕೊಂಡಿದ್ದಾರೆ.