ಪಾಕಿಸ್ತಾನದ ನಟಿ ಹಾಗೂ ಖ್ಯಾತ ಗಾಯಕಿ ರಾಬೀ ಪೀರ್ಜಾದಾ ಇದೀಗ ಸಲ್ಮಾನ್ ಖಾನ್ ನಟಿಸುತ್ತಿರುವ ಸಿನಿಮಾಗಳಿಂದಾಗಿ ಪಾಕಿಸ್ತಾನದಲ್ಲಿ ಅಪರಾಧಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿವೆ ಎಂಸು ಸಲ್ಲು ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾರೆ.

ಲಾಹೋರ್(ಮಾ.04): ಪಾಕಿಸ್ತಾನದ ನಟಿ ಹಾಗೂ ಖ್ಯಾತ ಗಾಯಕಿ ರಾಬೀ ಪೀರ್ಜಾದಾ ಇದೀಗ ಸಲ್ಮಾನ್ ಖಾನ್ ನಟಿಸುತ್ತಿರುವ ಸಿನಿಮಾಗಳಿಂದಾಗಿ ಪಾಕಿಸ್ತಾನದಲ್ಲಿ ಅಪರಾಧಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿವೆ ಎಂಸು ಸಲ್ಲು ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾರೆ.

ಲಾಹೋರ್'ನಲ್ಲಿ ಪತ್ರಿಕಾ ಗೋಷ್ಠಿಯೊಂದರಲ್ಲಿ ಮಾತನಾಡಿದ ರಾಬೀ ಸಲ್ಮಾನ್ ಖಾನ್ ನಟಿಸುತ್ತಿರುವ ಸಿನಿಮಾಗಳಿಂದಾಗಿ ಪಾಕಿಸ್ತಾನದಲ್ಲಿ ಅಪರಾಧಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿವೆ. ಇಲ್ಲಿನ ಯುವಜನತೆ ಸಲ್ಮಾನ್ ಖಾನ್ ಸಿನಿಮಾಗಳನ್ನು ನೋಡಿ ಹಾಳಾಗುತ್ತಿದ್ದಾರೆ. ವಾಸ್ತವವಾಗಿ ಬಾಲಿವುಡ್'ನ ಎಲ್ಲಾ ಸಿನಿಮಾಗಳನ್ನು ಅಪರಾಧಗಳನ್ನೇ ಕೇಂದ್ರವಾಗಿಟ್ಟುಕೊಂಡು ನಿರ್ಮಿಸಲಾಗುತ್ತದೆ. ಅದರಲ್ಲೂ ಸಲ್ಮಾನ್ ಖಾನ್ ನಟಿಸುವ ಸಿನಿಮಾಗಳಲ್ಲಿ 'ಕ್ರಿಮಿನಲ್ ಚಟುವಟಿಕೆಗಳು' ಹೆಚ್ಚಾಗಿರುತ್ತವೆ' ಎಂದು ರಾಬೀ ಆರೋಪಿಸಿದ್ದಾರೆ.

ಇದೇ ಸಂದರ್ಭದಲ್ಲಿ ಭಾರತೀಯ ಸಿನಿಮಾಕಾರರರಿಗೂ ಸವಾಲೆಸೆದಿರುವ ರಾಬೀ 'ನಾನು ಬಾಲಿವುಡ್ ಸಿನಿಮಾಕಾರರ ಅವರು ತಮ್ಮ ಯುವಜನತೆಗಾಗಿ ಏನನ್ನು ಮಾಡುತ್ತಿದ್ದಾರೆ? ಯುವಜನರಿಗೆ ಏನನ್ನು ಕಲಿಸುತ್ತಿದ್ದಾರೆ? ಯಾವ ಸಂದೇಶ ನೀಡುತ್ತಿದ್ದಾರೆ? ಎಂದು ಕೇಳಲಿಚ್ಛಿಸುತ್ತೇನೆ. ಒಂದು ಕಾಲದಲ್ಲಿ ಪಾಕಿಸ್ತಾನದಲ್ಲಿ ಸಾಮಾಜಿಕ ಕಳಕಳಿಯ ಸಿನಿಮಾಗಳನ್ನು ನಿರ್ಮಿಸಲಾಗುತ್ತಿತ್ತು, ಆದರೆ ಬಾಲಿವುಡ್ ಇದೆಲ್ಲವನ್ನು ಇಂದು ಬದಲಾಯಿಸಿದೆ' ಎಂದಿದ್ದಾರೆ.

ಕೆಲವೇ ದಿನಗಳಲ್ಲಿ ರಾಬಿಯ ಸಿನಿಮಾವೊಂದು ಬಿಡುಗಡೆಗೊಳ್ಳಲಿದ್ದು, ಇದರ ಪ್ರಚಾರ ಕಾರ್ಯಕ್ರಮದಲ್ಲಿ ಈ ನಟಿ ಬ್ಯೂಸಿಯಾಗಿದ್ದಾರೆ. ಅಲ್ಲದೇ 'ಕಿಸ್ಸಾ ಕುರ್ಸಿ ಕಾ' ಹಾಗೂ Whatsapp With Rabi' ಎಂಬ ಕಾರ್ಯಕ್ರಮಗಳನ್ನು ನಿರೂಪಿಸುತ್ತಿದ್ದಾರೆ. ಇನ್ನು ಪ್ರಸಕ್ತ ವರ್ಷದಲ್ಲಿ 'ಶೋರ್ ಶರಾಬಾ' ಹಾಗೂ ಪ್ಯಾರ್ ಕೀ FIR' ಎಂಬ ಸಿನಿಮಾಗಳೂ ಕೂಡಾ ರಿಲೀಸಾಗಲಿವೆ.