ಬೆಂಗಳೂರು (ನ. 17): ಕಿಚ್ಚ ಸುದೀಪ್ ಅಭಿನಯದ ಬಹುನಿರಿಕ್ಷಿತ ಚಿತ್ರ ಪೈಲ್ವಾನ್ ಚಿತ್ರದ ಅಧಿಕೃತ ಟೀಸರ್ ರಿಲೀಸಾಗಿದೆ. 

 

ಸುದೀಪ್ ಸಖತ್ ಸ್ಲಿಮ್ ಆಗಿದ್ದಾರೆ. ಪೈಲ್ವಾನ್ ಗೆ ಹೇಳಿ ಮಾಡಿಸಿದ ಕಟ್ಟು ಮಸ್ತಾದ ದೇಹ ಬೆಳೆಸಿಕೊಂಡಿದ್ದಾರೆ.  ಸುದೀಪ್ ರ ಈ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. 

ಪೈಲ್ವಾನ್ ತಂಡ ಸುದೀಪ್ ಗೆ ಬಾದ್ ಶಾ ಎಂಬ ಹೊಸ ಬಿರುದು ನೀಡಿ ಗೌರವಿಸಿದೆ. 

ಸುದೀಪ್ ವರ್ಕೌಟನ್ನು ಪತ್ನಿ ಪ್ರಿಯಾ ಮೆಚ್ಚಿಕೊಂಡಿದ್ದಾರೆ. ಪೈಲ್ವಾನ್ ಪೋಸ್ಟರ್ ನೋಡಿ ಪತಿಯನ್ನು ಹೊಗಳಿದ್ದಾರೆ. ಸುದೀಪ್‌ರನ್ನು ಈ ರೀತಿ ನೋಡುತ್ತೇನೆಂದು ನಾನು ಎಂದಿಗೂ ಭಾವಿಸಿರಲಿಲ್ಲ. ಇದು ಸತತ ಪರಿಶ್ರಮ, ಶ್ರದ್ಧೆ, ಛಲದ ಪ್ರತೀಕ ಎಂದು ಹಾಡಿ ಹೊಗಳಿದ್ದಾರೆ. ಪತ್ನಿಯ ಮಾತುಗಳಿಗೆ ಸುದೀಪ್ ಪ್ರತಿಕ್ರಿಯಿಸುತ್ತಾ, ನಿನ್ನ ಛಲದ ಮುಂದೆ ಇದೇನೂ ಅಲ್ಲ. ಥ್ಯಾಂಕ್ಸ್ ಫಾರ್ ಇನ್ಸ್‌ಪೈರಿಂಗ್ ಎಂದು ಹೇಳಿದ್ದಾರೆ.