Asianet Suvarna News Asianet Suvarna News

ಪದ್ಮಾವತಿ ವಿವಾದ: ರಜಪುತ್- ಕರ್ಣಿ ಸಭಾದೊಂದಿಗೆ ಬನ್ಸಾಲಿ ಒಪ್ಪಂದ

‘ಪದ್ಮಾವತಿ’ಗೆ ಸಂಬಂಧಿಸಿದಂತೆ ಸಂಜಯ್ ಲೀಲಾ ಬನ್ಸಾಲಿ ರಾಜಪೂತ್ ಸಭಾ ಹಾಗೂ ಕರ್ಣಿ ಸಭಾದೊಂದಿಗೆ ಲಿಖಿತ  ಒಪ್ಪಂದಕ್ಕೆ ಬಂದಿದ್ದಾರೆ.  

Padmavati row Sanjay Leela Bhansali arrives at a written agreement with Karni Sena and Rajput Sabha

ನವದೆಹಲಿ (ಜ.31): ‘ಪದ್ಮಾವತಿ’ಗೆ ಸಂಬಂಧಿಸಿದಂತೆ ಸಂಜಯ್ ಲೀಲಾ ಬನ್ಸಾಲಿ ರಾಜಪೂತ್ ಸಭಾ ಹಾಗೂ ಕರ್ಣಿ ಸಭಾದೊಂದಿಗೆ ಲಿಖಿತ ಒಪ್ಪಂದಕ್ಕೆ ಮುಂದಾಗಿದ್ದಾರೆ. 

ರಾಣಿ ಪದ್ಮಾವತಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ನಡುವಿನ ರೋಮ್ಯಾಂಟಿಕ್ ಸೀನ್ ಅಥವಾ ಹಾಡಿನ ದೃಶ್ಯ ಚಿತ್ರದಲ್ಲಿ ಇದೆ ಎನ್ನಲಾಗಿದೆ. ಇದನ್ನು ಖಂಡಿಸಿ ಜೈಪುರದಲ್ಲಿ ಫಿಲ್ಮ್ ಸೆಟ್ಟನ್ನು ಕರ್ಣಿ ಸೇನಾದವರು ಧ್ವಂಸ ಮಾಡಿ ಬನ್ಸಾಲಿ ಮೇಲೆ ಹಲ್ಲೆ ಮಾಡಿದ್ದರು.

ಪದ್ಮಾವತಿ ಚಿತ್ರದಲ್ಲಿ ರಾಣಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ನಡುವೆ ಯಾವುದೇ ರೀತಿಯ ಪ್ರೇಮ ಸಲ್ಲಾಪಗಳನ್ನು ತೋರಿಸಲಾಗಿಲ್ಲ. ಈ ವಿಷಯದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ಚಿತ್ರ ತಯಾರಿಸಲಾಗಿದೆ. ಕತೆಯನ್ನು ತಪ್ಪಾಗಿ ಬಿಂಬಿಸಿ ಯಾರೊಬ್ಬರ ಭಾವನೆಗೂ ಧಕ್ಕೆ ತರುವುದು ನಮ್ಮ ಉದ್ದೇಶವಲ್ಲ. ಕರ್ಣಿ ಸೇನಾ ಅಥವಾ ರಜಪೂತ್ ಸಭಾಗೆ ಏನಾದರೂ ಸಂದೇಹ, ಡಿಮ್ಯಾಂಡ್ ಗಳಿದ್ದರೆ ನಮ್ಮ ಮುಂದೆ ಇಡಲಿ ಎಂದು ಬನ್ಸಾಲಿ ಸ್ಪಷ್ಟಪಡಿಸಿದ್ದಾರೆ.   

Follow Us:
Download App:
  • android
  • ios