ಪದ್ಮಾವತ್ ಚಿತ್ರಕ್ಕೆ ಮಲೇಷ್ಯಾದಲ್ಲಿ ನಿಷೇಧ

First Published 30, Jan 2018, 9:21 AM IST
Padmaavat Banned in Malaysia by Censor board
Highlights

ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಲನಚಿತ್ರಕ್ಕೆ ಮಲೇಷ್ಯಾದ ಸೆನ್ಸಾರ್ ಬೋರ್ಡ್ ನಿಷೇಧ ಹೇರಿದೆ.

ಮಲೇಷಿಯಾ: ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಲನಚಿತ್ರಕ್ಕೆ ಮಲೇಷ್ಯಾದ ಸೆನ್ಸಾರ್ ಬೋರ್ಡ್ ನಿಷೇಧ ಹೇರಿದೆ.

ಸಿನಿಮಾದಲ್ಲಿ ಮುಸ್ಲಿಮರ ಭಾವನೆಗಳಿಗೆ ಘಾಸಿ ಉಂಟು ಮಾಡುವ ಅಂಶಗಳಿರುವ ಹಿನ್ನೆಲೆಯಲ್ಲಿ, ‘ಮುಸ್ಲಿಂ ಧರ್ಮದ ಸೂಕ್ಷ್ಮತೆ’ಯ ಮೇಲೆ ಪ್ರಭಾವ ಬಿರುತ್ತದೆ ಎಂಬ ಕಾರಣ ನೀಡಿ ನಿಷೇಧ ಹೇರಿದೆ.

ಮಲೇಷ್ಯಾದಂಥ ಮುಸ್ಲಿಂ ಬಾಹುಳ್ಯದ ರಾಷ್ಟ್ರಗಳಲ್ಲಿ ಇಂತಹ ಸಿನಿಮಾ ಅಪಾಯಕಾರಿ ಎಂದಿದೆ. ಭಾರತದಲ್ಲೂ ಕೆಲವೊಂದು ಬದಲಾವಣೆಯೊಂದಿಗೆ ಚಿತ್ರ ಬಿಡುಗಡೆಗೆ ಅನುಮತಿ ನೀಡಲಾಗಿತ್ತು. ಆದರೆ ಪಾಕಿಸ್ತಾನದ ಸೆನ್ಸಾರ್ ಬೋರ್ಡ್ ಯಾವುದೇ ಕತ್ತರಿ ಇಲ್ಲದೆ ‘ಯು’ ಪ್ರಮಾಣಪತ್ರ ನೀಡಿ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಿದೆ.

loader