ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದೆ ಬರುವಂತಹ ಪ್ರಾಮಾಣಿಕರು, ಭ್ರಷ್ಟಮುಕ್ತರಿಗೆ ಮೊದಲು ಅವಕಾಶವನ್ನು ನೀಡಲಾಗುತ್ತದೆ
ಹಾಸನ(ಡಿ.05): 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪ್ರಜ್ಞಾವಂತರು, ಬುದ್ಧಿವಂತರು, ಚಿಂತಕರನ್ನು ಎಚ್ಚರಿಸುವಂತಹ ಕೆಲಸ ಮಾಡುತ್ತೇನೆ. ತಮ್ಮ ಪಕ್ಷವು ‘ಮಿಷನ್ 224’ ಗುರಿಯನ್ನು ಹೊಂದಿದೆ ಎಂದು ಕರ್ನಾಟಕ ಪ್ರಜ್ಞಾವಂತ ಜನರ ಪಕ್ಷದ ಸಂಸ್ಥಾಪಕ ಹಾಗೂ ನಟ ಉಪೇಂದ್ರ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದೆ ಬರುವಂತಹ ಪ್ರಾಮಾಣಿಕರು, ಭ್ರಷ್ಟಮುಕ್ತರಿಗೆ ಮೊದಲು ಅವಕಾಶವನ್ನು ನೀಡಲಾಗುತ್ತದೆ. ನಂತರ ತಾನು ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ತೀರ್ಮಾನಿಸಲಾಗುತ್ತದೆ ಎಂದರು
