ಬೇರೆಯವರ ಪತ್ನಿ ಸಿಕ್ಕಾಗ ಹಾಗೂ ಸ್ವಂತ ಹೆಂಡತಿ ಪಕ್ಕದಲ್ಲಿದ್ದಾಗ ಪುರುಷರು ಹೀಗೆ ಮಾಡ್ತಾರಂತೆ! ವೈರಲ್ ವಿಡಿಯೋಗೆ ಭರ್ಜರಿ ಕಮೆಂಟ್ಸ್
ಗಂಡ- ಹೆಂಡತಿಯ ಸಂಬಂಧದ ಕುರಿತು ಮಾಡುವ ಜೋಕ್ಸ್, ಮೀಮ್ಸ್ಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿಯೂ ಹೆಚ್ಚಾಗಿ ಹೆಂಡತಿಯರ ಮೇಲಿನ ಜೋಕ್ಸ್ಗಳೇ ಹೆಚ್ಚು ಎಂದರೂ ತಪ್ಪಾಗಲಿಕ್ಕಿಲ್ಲ. ದಂಪತಿ ನಡುವಿನ ಜೋಕ್ಸ್ಗಳನ್ನು ಯಾರೂ ಹೆಚ್ಚಾಗಿ ಸೀರಿಯಸ್ ತೆಗೆದುಕೊಳ್ಳದೇ ತಮ್ಮ ಮನೆಯಲ್ಲಿಯೂ ಹೀಗೆಯೇ ಎಂದು ಅಂದುಕೊಳ್ಳುವವರೇ ಹೆಚ್ಚು. ಅದಕ್ಕಾಗಿಯೇ ಇವುಗಳ ಜೋಕ್ಸ್, ಮೀಮ್ಸ್ಗಳು ಸಕತ್ ವೈರಲ್ ಆಗುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಥರಹೇವಾರಿ ಕಮೆಂಟ್ಸ್ ಜೊತೆ ವೈರಲ್ ಆಗುತ್ತಿವೆ. ಇದರಲ್ಲಿ ಗಂಡಸರು ಬೇರೆ ಹೆಂಡತಿಯರು ಸಿಕ್ಕರೆ ಹೇಗಿರ್ತಾರೆ ಹಾಗೂ ಸ್ವಂತ ಹೆಂಡತಿ ಜೊತೆ ಹೇಗಿರ್ತಾರೆ ಎನ್ನುವ ಕ್ಯಾಪ್ಷನ್ ಮೂಲಕ ಶೇರ್ ಮಾಡಲಾಗಿದೆ.
ಇದರಲ್ಲಿ, ಅಜಯ್ ದೇವಗನ್ ಮತ್ತು ಟಬು ಅವರನ್ನು ತೋರಿಸಲಾಗಿದೆ. ಇದು ಯಾವುದೋ ಸಿನಿಮಾದ ಸೀನ್ ಆಗಿದ್ದು, ಇದರಲ್ಲಿ ಟಬು ಅಜಯ್ ದೇವಗನ್ ಅವರ ಜೊತೆ ತೀರಾ ಸಲುಗೆಯಿಂದ ಇರುವುದನ್ನು ನೋಡಬಹುದು. ಅಜೆಯ್ ದೇವಗನ್ ಕೂಡ ಟಬು ಜೊತೆ ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಅದೇ ಇನ್ನೊಂದು ವಿಡಿಯೋದಲ್ಲಿ ಅಜೆಯ್ ದೇವಗನ್ ಮತ್ತು ಕಾಜೋಲ್ ದಂಪತಿಯನ್ನು ನೋಡಬಹುದು. ಇದು ಯಾವುದೋ ಅವಾರ್ಡ್ ಫಂಕ್ಷನ್ನ ವಿಡಿಯೋ ಆಗಿದೆ. ಇದರಲ್ಲಿ ಕಾಜೋಲ್ ಏನನ್ನೋ ಹೇಳಲು ಅಜೆಯ್ ದೇವಗನ್ ಅವರನ್ನು ನೋಡಿದರೂ ಅವರು ಮಾತ್ರ ನೋಡುವುದೇ ಇಲ್ಲ. ಇದರಿಂದ ಒಂದು ಹಂತದಲ್ಲಿ ಕಾಜೋಲ್ಗೆ ಸಿಟ್ಟು ಬಂದಂತೆ ಕಾಣಿಸುತ್ತದೆ. ಇವಿಷ್ಟೇ ವೈರಲ್ ಆಗಿದ್ದು, ಬೇರೆಯವರ ಪತ್ನಿ ಹಾಗೂ ಸ್ವಂತ ಪತ್ನಿ ಪಕ್ಕದಲ್ಲಿ ಇದ್ದಾಗ ಗಂಡಸರು ಹೇಗೆ ನಡೆದುಕೊಳ್ಳುತ್ತಾರೆ ಎಂದು ಶೀರ್ಷಿಕೆ ನೀಡಲಾಗಿದೆ.
ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಇದು ನಿಜ ನಿಜ ಎನ್ನುತ್ತಿದ್ದರೆ, ಮತ್ತೆ ಕೆಲವರು ಇದರಲ್ಲಿ ಟಬುನೇ ಅಜೆಯ್ ದೇವಗನ್ ಜೊತೆ ಅತಿರೇಕದಿಂದ ವರ್ತಿಸುತ್ತಿರುವುದುನ್ನು ನೋಡಬಹುದು, ಪಾಪ ಇದರಲ್ಲಿ ಅಜೆಯ್ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಇದು ಪುರುಷರಿಗೆ ಮಾತ್ರವಲ್ಲದೇ ಮಹಿಳೆಯರಿಗೂ ಅನ್ವಯ ಆಗುತ್ತದೆ ಎನ್ನುತ್ತಿದ್ದಾರೆ. ಇನ್ನು ಅಜೆಯ್ ದೇವಗನ್ ಮತ್ತು ಕಾಜೋಲ್ ಕುರಿತು ಹೇಳುವುದಾದರೆ, ಸಿನಿ ತಾರೆಯರು ಬಹುಕಾಲ ಒಟ್ಟಿಗೇ ಇರುವುದು ಅಪರೂಪದ ಎಂದೇ ಹೇಳಬೇಕು. ಈ ಬಣ್ಣದ ಲೋಕದಲ್ಲಿ ಅಕ್ರಮ ಸಂಬಂಧ, ಒಂದಕ್ಕಿಂತ ಹೆಚ್ಚು ಮದುವೆ, ವಿಚ್ಛೇದನ ನೀಡದೇ ಮದುವೆಯಾಗುವುದು, ದೀರ್ಘ ಕಾಲ ಲಿವ್ ಇನ್ ಸಂಬಂಧದಲ್ಲಿ ಇದ್ದು ಕೈಕೊಡುವುದು, ಮಗಳ ವಯಸ್ಸಿನವಳ ಜೊತೆ ಮದುವೆಯಾಗುವುದು, ಇನ್ನೊಬ್ಬಳು ನಟಿ ಸಿಕ್ಕಳೆಂದು ಪತ್ನಿಯನ್ನು ಬಿಡುವುದು ಇವೆಲ್ಲವೂ ಮಾಮೂಲು. ಆದರೆ ಕೆಲವೇ ಕೆಲವು ತಾರಾ ಜೋಡಿಗಳು ಮಾತ್ರ ಆದರ್ಶವಾಗಿವೆ. ಮದುವೆಯಾಗಿ ಹತ್ತಾರು ವರ್ಷಗಳಾದರೂ ಸುಖದಿಂದ ಬಾಳುತ್ತಿರುವ ಜೋಡಿಗಳ ನಿದರ್ಶನ ಅಪರೂಪ. ಅಂಥ ತಾರಾ ಜೋಡಿಯಲ್ಲೊಂದು ಅಜಯ್ ದೇವಗನ್ ಮತ್ತು ಕಾಜೋಲ್ ಜೋಡಿ. 1999ರ ಫೆಬ್ರುವರಿ 24ರಂದು ಮದುವೆಯಾಗಿರುವ ಈ ಜೋಡಿ ಮದುವೆಯಾಗಿ 26 ವರ್ಷಗಳಾಗಿವೆ.
ಅಜಯ್ ಮತ್ತು ಕಾಜೋಲ್ ಉತ್ತಮ ಸ್ನೇಹಿತರಾಗಿದ್ದರು, DDLJ ನಟಿ ಆಗಾಗ್ಗೆ ಅಜಯ್ ದೇವಗನ್ ಅವರ ಪ್ರೀತಿಯ ಜೀವನದ ಬಗ್ಗೆ ಸಲಹೆಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಇವರ ಈ ಸಲುಗೆ ಮುಂದೊಂದು ದಿನ ಪ್ರೀತಿಯಲ್ಲಿ ಬದಲಾಗಿ, ಮದುವೆಯಾಗುವ ಮಟ್ಟಿಗೂ ಹೋಗುತ್ತದೆ ಎಂದು ಅಂದುಕೊಂಡಿರಲಿಲ್ಲವಂತೆ. ಈ ಬಗ್ಗೆ ಅವರೇ ಖುದ್ದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಕಾಜೋಲ್ ತಂದೆಗೆ ಈ ಮದುವೆ ಇಷ್ಟವಿಲ್ಲದೇ ಇರಲು ಕಾರಣ ಏನೆಂದರೆ, ಕಾಜೋಲ್ ಅದಾಗಲೇ 24 ವರ್ಷ ವಯಸ್ಸು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗಳ ಮದುವೆ ಬೇಡ ಎನ್ನುವುದು ಅಪ್ಪನ ಸಲಹೆ. ಅದರಲ್ಲಿಯೂ ತಾವು ಅಜಯ್ ದೇವಗನ್ ಅವರನ್ನು ಮದುವೆಯಾಗುವ ವಿಷಯ ಪ್ರಸ್ತಾಪಿಸಿದಾಗ ಬೇಡವೇ ಬೇಡ ಎಂದರಂತೆ. ಆಗ ಅಜಯ್ ಅವರಿಗೆ 29 ವರ್ಷ ವಯಸ್ಸು. ಇಬ್ಬರ ನಡುವೆ ಐದು ವರ್ಷ ಅಂತರವಷ್ಟೇ. ಆದರೆ ಈ ಮದುವೆಗೆ ತಂದೆ ಅದ್ಯಾಕೋ ಇಷ್ಟಪಟ್ಟಿರಲಿಲ್ಲ. ಕೊನೆಗೆ ಓಡಿ ಹೋಗಿ ಮದುವೆಯಾದವರು ಇವರು!

