Asianet Suvarna News Asianet Suvarna News

ಆಸ್ಕರ್ಸ್: ಮೂನ್'ಲೈಟ್ ಅತ್ಯುತ್ತಮ ಚಿತ್ರ; ಜಂಗಲ್ ಬುಕ್'ಗೂ ಆಸ್ಕರ್ಸ್ ಗರಿ

89 ನೇ ಅಕಾಡೆಮಿಕ್ ಆಸ್ಕರ್'ನಲ್ಲಿ ಜಂಗಲ್ ಬುಕ್ ಚಿತ್ರಕ್ಕೆ  2017ನೇ ಸಾಲಿನ ಆಸ್ಕರ್ ದಿ ಜಂಗಲ್ ಬುಕ್ ಸಿನಿಮಾಗೆ ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ ಅವಾರ್ಡ್ ದೊರೆತಿದೆ.

oscars winners list

ಲಾಸ್ ಏಂಜಲಿಸ್(ಫೆ. 23): ಸಿನಿಮಾ ರಂಗದ ಅತ್ಯುನ್ನತ ಗರಿಮೆಯಾದ ಆಸ್ಕರ್ ಅವಾರ್ಡ್​ ಅನ್ನು ಇಂದು ಪ್ರಧಾನ ಮಾಡಲಾಯಿತು. 89 ನೇ ಅಕಾಡೆಮಿಕ್ ಆಸ್ಕರ್'ನಲ್ಲಿ ಜಂಗಲ್ ಬುಕ್ ಚಿತ್ರಕ್ಕೆ  2017ನೇ ಸಾಲಿನ ಆಸ್ಕರ್ ದಿ ಜಂಗಲ್ ಬುಕ್ ಸಿನಿಮಾಗೆ ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ ಅವಾರ್ಡ್ ದೊರೆತಿದೆ. ಇದೇ ಮೊದಲ ಬಾರಿಗೆ ಆಸ್ಕರ್ ಒಬ್ಬ ಮುಸ್ಲಿಂ ನಟನ ಪಾಲಾಗಿದೆ. ಉತ್ತಮ ಪೋಷಕ ನಟ ಮಹೆರ್ಶಾಲಾ ಆಲಿ ಅವರಿಗೆ ಸಂದಿದ್ದು ಮೂನ್ ಲೈಟ್ ಚಿತ್ರದ ಅತ್ಯತ್ತಮ ನಟನೆಗಾಗಿ ಆಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಮೂನ್ ಲೈಟ್’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಮಹೇರ್ಶಾಲಾ ಅಲಿ ಪಾಲಾಗಿದೆ. ಇನ್ನೂ ಲಾ ಲಾ ಲ್ಯಾಂಡ್ ಚಿತ್ರವೂ ಅತ್ಯುತ್ತಮ ನಟ, ನಟಿ, ನಿರ್ದೇಶಕ ಮತ್ತು ಉತ್ತಮ ಚಿತ್ರದ ಹೆಗ್ಗಳಿಕೆಗೆ ಪಾತ್ರವಾಗಿದೆ. ಡೇಮಿಯಲ್ ಚಾಝೆಲ್ಲೆ ನಿರ್ದೇಶನದ ಅಮೆರಿಕಾದ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿರುವ ಲಾ ಲಾ ಲ್ಯಾಂಡ್ ನಲ್ಲಿ ರಯಾನ್ ಗೋಸ್ಲಿಂಗ್ ಮತ್ತು ಎಮ್ಮಾ ಸ್ಟೋನ್ ಅಭಿನಯಿಸಿದ್ದಾರೆ. 2017ನೇ ಸಾಲಿನ ಗೋಲ್ಡನ್ ಗ್ಲೋಬ್ಸ್ ನಲ್ಲಿ ಏಳು ಪ್ರಶಸ್ತಿ ಬಾಚಿಕೊಂಡಿದ್ದ ಮತ್ತು 14ನೇ ಅಕಾಡೆಮಿ ಅವಾರ್ಡ್ಸ್ ಗೆ ನಾಮಾಂಕಿತಗೊಂಡಿದ್ದ ಲಾ ಲಾ ಲ್ಯಾಂಡ್ ಅಪಾರ ಜನಮೆಚ್ಚುಗೆ ಗಳಿಸಿತ್ತು. ಇನ್ನು, ಫೆನ್ಸೆಸ್ ಚಿತ್ರದ ಅಭಿನಯಕ್ಕಾಗಿ ವಿಯೊಲಾ ಡೇವಿಸ್ ಗೆ ಉತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ. ಆಸ್ಕರ್ ಪ್ರಶಸ್ತಿ ಗಳಿಸಿದ ಮೊದಲ ಕಪ್ಪು ವರ್ಣದ ನಟಿ ಈಕೆಯಾಗಿದ್ದಾರೆ. ಇನ್ನೂ ಆಸ್ಕರ್ ನ ರೆಡ್ ಕಾರ್ಪೆಟ್ ನಲ್ಲಿ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಕೂಡ ಭಾಗಿಯಾಗಿದ್ರು.

ಆಸ್ಕರ್ಸ್ ಪ್ರಶಸ್ತಿಗಳ ಪಟ್ಟಿ

ಅತ್ಯುತ್ತಮ ಚಿತ್ರ: "ಮೂನ್'ಲೈಟ್"

ಅತ್ಯುತ್ತಮ ನಾಯಕನಟಿ: ಎಮ್ಮಾ ಸ್ಟೋನ್ (ಚಿತ್ರ: ಲಾ ಲಾ ಲ್ಯಾಂಡ್)

ಅತ್ಯುತ್ತಮ ನಾಯಕನಟ: ಕೆಸೀ ಅಫ್ಲೆಕ್ (ಚಿತ್ರ- 'ಮ್ಯಾಂಚೆಸ್ಟರ್ ಬೈ ದ ಸೀ')

ಅತ್ಯುತ್ತಮ ನಿರ್ದೇಶಕ: ಡೇಮಿಯೆನ್ ಚಾಜೆಲೆ (ಚಿತ್ರ- ಲಾ ಲಾ ಲ್ಯಾಂಡ್)

ಅತ್ಯುತ್ತಮ ಚಿತ್ರಕಥೆ: ಬ್ಯಾರಿ ಜೆಂಕಿನ್ಸ್ ಮತ್ತು ಟ್ಯಾರೆಲ್ ಆಲ್ವಿನ್ ಮೆಕ್ರಾನೇ (ಚಿತ್ರ- ಮೂನ್'ಲೈಟ್)

ಅತ್ಯುತ್ತಮ ಮೂಲ ಚಿತ್ರಕಥೆ: ಕೆನೆತ್ ಲೋನೆರ್ಗನ್ (ಚಿತ್ರ- ಮ್ಯಾಂಚೆಸ್ಟರ್ ಬೈ ದ ಸೀ)

ಅತ್ಯುತ್ತಮ ಛಾಯಾಗ್ರಹಣ: ಲೈನಸ್ ಸ್ಯಾಂಡ್'ಗ್ರೆನ್ (ಚಿತ್ರ- ಲಾ ಲಾ ಲ್ಯಾಂಡ್)

ಅತ್ಯುತ್ತಮ ಚಿತ್ರ ಸಂಕಲನ(Editing): ಜಾನ್ ಗಿಲ್ಬರ್ಟ್ (ಚಿತ್ರ- ಹ್ಯಾಕ್'ಶಾ ರಿಡ್ಜ್)

ಅತ್ಯುತ್ತಮ ವಿಷುವಲ್ ಎಫೆಕ್ಟ್ಸ್: ರಾಬರ್ಟ್ ಲೆಗಾಟೋ, ಆ್ಯಡಂ ವಾಲ್ಡೆಜ್, ಆಂಡ್ರ್ಯೂ ಜೋನ್ಸ್ ಮತ್ತು ಡ್ಯಾನ್ ಲೆಮ್ಮೋನ್ (ಚಿತ್ರ- ದಿ ಜಂಗಲ್ ಬುಕ್)

ಅತ್ಯುತ್ತಮ ವಿದೇಶೀ ಸಿನಿಮಾ: ಅಸ್ಘರ್ ಫರ್ಹಾದಿ ನಿರ್ದೇಶನದ "ದಿ ಸೇಲ್ಸ್'ಮ್ಯಾನ್" (ಭಾಷೆ- ಪರ್ಷಿಯನ್)

ಅತ್ಯುತ್ತಮ ಪೋಷಕ ನಟ: ಮಹೇರ್ಶಾಲಾ ಅಲಿ (ಚಿತ್ರ: ಮೂನ್'ಲೈಟ್)

ಅತ್ಯುತ್ತಮ ಪೋಷಕ ನಟಿ: ವಿಯೋಲಾ ಡೇವಿಸ್ (ಚಿತ್ರ- ಫೆನ್ಸೆಸ್)

Follow Us:
Download App:
  • android
  • ios