ಕನ್ನಡ ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಈ ನಡುವೆ ಇಂಟರ್ನೆಟ್ ಸೆನ್ಸೇಷನ್ ಒರಿ (Orry) ಕನ್ನಡದಲ್ಲಿ ಕನ್ನಡಿಗರಿಗೆ ಶುಭಾಶಯ ತಿಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ಕನ್ನಡ ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಈ ನಡುವೆ ಇಂಟರ್ನೆಟ್ ಸೆನ್ಸೇಷನ್ ಒರಿ (Orry) ಕನ್ನಡದಲ್ಲಿ ಕನ್ನಡಿಗರಿಗೆ ಶುಭಾಶಯ ತಿಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಕಂಟೆಂಟ್ ಕ್ರಿಯೇಟರ್ ಸುಶನ್ ಶೆಟ್ಟಿ ಅವರು ಒರಿಗೆ ಕನ್ನಡದ ಕೆಲವು ಪದಗಳನ್ನು ಹೇಳಿಕೊಟ್ಟಿದ್ದು, ಅವರಿಂದಲೇ ‘ಹ್ಯಾಪಿ ಕನ್ನಡ ರಾಜ್ಯೋತ್ಸವ’ ಎಂದು ಹೇಳಿಸಿದ್ದಾರೆ.

ಒರಿಗೆ ಕನ್ನಡ ಹೇಳಿಕೊಟ್ಟ ಸುಶನ್ ಶೆಟ್ಟಿ

ಕಂಟೆಂಟ್ ಕ್ರಿಯೇಟರ್ ಸುಶನ್ ಶೆಟ್ಟಿ ( @speak_with_sushan ) ಅವರು ತಮ್ಮ ವಿಶೇಷ ವಿಡಿಯೋದಲ್ಲಿ ಸೆಲೆಬ್ರಿಟಿ ಒರಿ ಅವರಿಗೆ ಕನ್ನಡದಲ್ಲಿ ಮಾತನಾಡಲು ಕಲಿಸಿದ್ದಾರೆ. ಸುಶನ್ ಹೇಳಿಕೊಟ್ಟಂತೆ ಒರಿ ಕೂಡ ‘ಹ್ಯಾಪಿ ಕನ್ನಡ ರಾಜ್ಯೋತ್ಸವ’ ಎಂದು ಕನ್ನಡದಲ್ಲೇ ಶುಭಾಶಯ ಕೋರಿದ್ದಾರೆ. ಈ ವಿಡಿಯೋ ಕನ್ನಡಿಗರ ಗಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುಶನ್ ಶೆಟ್ಟಿ ಅವರ Speak with Sushan ಇನ್‌ಸ್ಟಾಗ್ರಾಂ ಪುಟ ಹಾಗೂ ಫೇಸ್‌ಬುಕ್ ಪೇಜ್‌ನಲ್ಲಿ ಈ ವಿಡಿಯೋವನ್ನು ವೀಕ್ಷಿಸಬಹುದು.

ಬೆಂಗಳೂರಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಒರಿ

ಇನ್ನು ಒರಿ ಅಕ್ಟೋಬರ್ 30, 2026ರಂದು ಬೆಂಗಳೂರಿಗೆ ಭೇಟಿ ನೀಡಿದ್ದರು. ಕೊರಮಂಗಲದ 5ನೇ ಬ್ಲಾಕ್‌ನಲ್ಲಿರುವ Cubora – The Luxury Night Club Experience ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು.

‘Orry & Glory – Grand Launch Edition’ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗೀತ, ಮನರಂಜನೆ ಮತ್ತು ಗ್ಲಾಮರ್‌ನ ಸಂಭ್ರಮ ಮನೆಮಾಡಿತ್ತು. ಒರಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದು, ಅವರ ಭೇಟಿಯ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಯಾರು ಈ ಒರಿ?

ಒರಿಯ ನಿಜವಾದ ಹೆಸರು ಓರ್ಹಾನ್ ಅವತ್ರಮಣಿ (Orhan Awatramani). ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಳ್ಳುವ ಮೂಲಕ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಸೆಲೆಬ್ರಿಟಿಗಳ ಜೊತೆಗಿನ ಫೋಟೋಗಳು, ವಿಭಿನ್ನ ಫ್ಯಾಷನ್ ಮತ್ತು ಅವರ ವಿಶಿಷ್ಟ ವ್ಯಕ್ತಿತ್ವದಿಂದಾಗಿ ಒರಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ.

ಈಗ ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಕನ್ನಡದಲ್ಲಿ ಶುಭಾಶಯ ಹೇಳಿರುವುದು ಕನ್ನಡಿಗರ ಗಮನ ಸೆಳೆದಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅನ್ಯಭಾಷಿಕ ಸೆಲೆಬ್ರಿಟಿಯೊಬ್ಬರು ಕನ್ನಡದಲ್ಲಿ ಶುಭಕೋರಿರುವ ಈ ವಿಡಿಯೋ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.